ಸಾರಿಗೆ ಸಿಬ್ಬಂದಿ ಬೇಡಿಕೆ ಈಡೇರಿಸಲು ಜೆಡಿಎಸ್ ಒತ್ತಾಯ

PRATAP JOGI
Published on

ಚಿತ್ರದುರ್ಗ: ರಸ್ತೆ ಸಾರಿಗೆ ನೌಕರರು ಮತ್ತು ಅಧೀನ ಸಂಸ್ಥೆಗಳ 1.30 ಲಕ್ಷ ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಓ.ಪ್ರತಾಪ್ ಜೋಗಿ ಒತ್ತಾಯಿಸಿದ್ದಾರೆ.

ಸೂಕ್ತ ವೇತನ, ಕುಟುಂಬ ಸದಸ್ಯರಿಗೆ ಭದ್ರತೆ, ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ ಸೇವೆ ಮತ್ತಿತರ ಸವಲತ್ತು ಇಲ್ಲದಿದ್ದರೂ ಸಿಬ್ಬಂದಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ.

ಆದ್ದರಿಂದ ರಾಜ್ಯ ಸರ್ಕಾರ ಇವರ ಬೇಡಿಕೆ ಈಡೇರಿಸಬೇಕೆಂದು ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಓ.ಪ್ರತಾಪ್ ಜೋಗಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net