ತಂಬಾಕು ಮಾರಾಟ, ಪ್ರಕರಣ ದಾಖಲು

TAMBAKU images
Published on

ಚಿತ್ರದುರ್ಗ: ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘನೆಗಾಗಿ ಅಂಗಡಿ ಮಾಲೀಕನೊಬ್ಬನ ವಿರುದ್ಧ ನಗರದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾ ಮಟ್ಟದ ತಂಬಾಕು ನಿಯಂತ್ರಣ ತಂಡ, ನಗರದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿದ್ದು, ಹೊಳಲ್ಕೆರೆ ರಸ್ತೆ ಅಂಗಡಿಯೊಂದರ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ. ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ್, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಪಿಎಸ್‌ಐ ಎಚ್.ಗಾದಿಲಿಂಗಪ್ಪ, ಸಿಬ್ಬಂದಿ ಬಿ. ಉದಯ್, ಚಿದಾನಂದ, ನಗರಸಭೆ ಹೆಲ್ತ್‌ಇನ್ಸ್‌ಪೆಕ್ಟರ್ ನಾಗರಾಜ, ಸಾಮಾಜಿಕ ಕಾರ್ಯಕರ್ತ ಕೆ.ಎಂ.ತಿಪ್ಪೇಸ್ವಾಮಿ ದಾಳಿ ವೇಳೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net