ಅಪಘಾತದಲ್ಲಿ ಅಂಗವಿಕಲನ ಸಾವು

CRIME download
Published on

ಚಿತ್ರದುರ್ಗ: ಗುರುವಾರ ರಾತ್ರಿ ಆದ ರಸ್ತೆ ಅಪಘಾತದಲ್ಲಿ ಅಂಗವಿಕಲನೊಬ್ಬ ಮೃತಪಟ್ಟಿದ್ದಾನೆ.

ಇಲ್ಲಿಯ ರಾಜೇಂದ್ರ ನಗರದ ನಿವಾಸಿ ತಿಪ್ಪೇಸ್ವಾಮಿ (45) ಮೂರು ಚಕ್ರದ ಸ್ಕೂಟಿಯಲ್ಲಿ ಜೆಎಂಐಟಿ ಸರ್ಕಲ್ ಬಳಿ ಹೋಗುತ್ತಿದ್ದಾಗ ರೋಡ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಬಿದ್ದಿದ್ದು, ತೀವ್ರ ಗಾಯಗೊಂಡಿದ್ದ ಆತ ಜಿಲ್ಲಾ ಆಸ್ಪತ್ರೆಯಲ್ಲಿ ಅಸು ನೀಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net