ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ

CTD TURUVNURU
Published on

ಚಿತ್ರದುರ್ಗ; ತುರುವನೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು, ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿ ಆರೋಗ್ಯ ಸಚಿವರಿಗೆ ಗ್ರಾಮಸ್ಥರು ಮೊಳಕಾಲ್ಮೂರಲ್ಲಿ ಇತ್ತೀಚೆಗೆ ಮನವಿ ಸಲ್ಲಿಸಿದರು.

ತುರುವನೂರು ಚಾರಿತ್ರಿಕ ಹೋರಾಟದ ತವರೂರು. ಅಸಹಕಾರ, ಅಸ್ಪಶ್ಯತಾ ನಿವಾರಣೆ ಹಾಗೂ ಸ್ವದೇಶಿ ಹಾಗೂ ಸ್ವಾತಂತ್ರ್ಯ ಚಳವಳಿಯ ನಾಯಕತ್ವ ವಹಿಸಿದ್ದ ಗ್ರಾಮ.

ಜಿಲ್ಲೆಯ ಅತ್ಯಂತ ದೊಡ್ಡ ಗ್ರಾಪಂ ಹೊಂದಿರುವ ಈ ಗ್ರಾಮದ ಜನಸಂಖ್ಯೆ 10 ಸಾವಿರ ದಾಟಿದೆ. ಇಲ್ಲಿ ಶೇ.80 ಸಂಖ್ಯೆಯಲ್ಲಿ ಎಸ್ಸಿ, ಎಸ್ಟಿ, ಹಿಂದುಳಿದ ಸಮುದಾಯದ ಜನರು ವಾಸವಿದ್ದಾರೆ. 60 ವರ್ಷಗಳ ಹಿಂದೆ ಅಂದಿನ ಜನಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾರಂಭವಾಗಿತ್ತು.

ಆದರೆ, ಈವರೆಗೂ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿಲ್ಲವೆಂದು ಗ್ರಾಮಸ್ಥರು ಸಚಿವರಿಗೆ ಮನದಟ್ಟು ಮಾಡಿಕೊಟ್ಟರು. ಜಿಲ್ಲಾ ವೈದ್ಯಾಧಿಕಾರಿಗಳು ಈಗಾಗಲೇ ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದು, ತಕ್ಷಣ ತಾವು ಅಂಗಿಕಾರ ನೀಡಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ಕಾಕಿ ಹನುಮಂತರೆಡ್ಡಿ, ಮಡ್ಡಿ ಮಂಜುನಾಥ್, ಶಶಿಧರ್‌ರೆಡ್ಡಿ, ಕಾರ್ತಿಕ್, ಬಾಳೆಕಾಯಿ ರಾಮದಾಸ್, ಜಯಪಾಲ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net