

ಚಿತ್ರದುರ್ಗ: ಖ್ಯಾತ ರಂಗಕರ್ಮಿ ದಿವಂಗತ ಸಿ.ಜಿ.ಕೃಷ್ಣಸ್ವಾಮಿ ಜನ್ಮ ದಿನದ ಅಂಗವಾಗಿ ಜೂ.27ರಂದು, ಸಿ.ಜಿ.ಕೆ ಬೀದಿ ರಂಗ ದಿನಾಚರಣೆ ಹಾಗೂ ರಂಗ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಗರದ ತಮಟಕಲ್ಲು ರಸ್ತೆ ಈಶ್ವರ ಬಡಾವಣೆ ವಚನಶ್ರೀ ನಿಲಯದಲ್ಲಿ ಅಂದು ಸಂಜೆ 4 ಗಂಟೆಗೆ ಕಾರ್ಯಕ್ರಮ ಜರುಗಲಿದೆ. ಇದೇ ವೇಳೆ ಸಂಗೀತ ವಿದ್ವಾನ್ ಎಂ.ತೋಟಪ್ಪ ಉತ್ತಂಗಿ ಇವರಿಗೆ ಎಡಿಸಿ ಸಿ.ಸಂಗಪ್ಪ ಪ್ರಶಸ್ತಿ ಪ್ರದಾನ ಮಾಡುವರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ತಿಳಿಸಿದ್ದಾರೆ.