ಮದಕರಿ ನಾಯಕರ ಇತಿಹಾಸ ಪಠ್ಯವಾಗಲಿ

CTD SENE
Published on

ಚಿತ್ರದುರ್ಗ: ಪಠ್ಯದಲ್ಲಿ ದುರ್ಗದ ದೊರೆ ರಾಜವೀರ ಮದಕರಿ ನಾಯಕರ ಇತಿಹಾಸ ಸೇರಿಸುವಂತೆ ಕರ್ನಾಟಕ ನವ ನಿರ್ಮಾಣ ಸೇನೆ ಅಧ್ಯಕ್ಷ ಭೀಮಾಶಂಕರ ಪಾಟೀಲ್ ರಾಜ್ಯಸರ್ಕಾರವನ್ನು ಒತ್ತಾಯಿಸಿದರು.

ಸೇನೆ ಜಿಲ್ಲಾ ಘಟಕದ ಕಚೇರಿ ಉದ್ಘಾಟನೆ ಅಂಗವಾಗಿ ಸೋಮವಾರ ನಗರದಲ್ಲಿರುವ ಮದಕರಿನಾಯಕರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲ ಪಕ್ಷಗಳು ಐತಿಹಾಸಿಕ ಚಿತ್ರದುರ್ಗದ ಏಳುಸುತ್ತಿನ ಕೋಟೆ ಮರೆತಂತಿವೆ ಎಂದು ಬೇಸರಿಸಿದರು.

ನಾಡಿನ ಇತಿಹಾಸವೇ ಸಾರ್ವಭೌಮವಾಗಬೇಕೆಂದು ಅಭಿಪ್ರಾಯಪಟ್ಟರು. ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ರಾಜ್ಯ ಮುಖಂಡ ಟಿ.ಆನಂದ್, ಮುಖಂಡರಾದ ತಿಪ್ಪೇಸ್ವಾಮಿ, ದುರ್ಗೇಶ್, ಓಬಳೇಶ್, ಮಂಜುನಾಥ, ಮಹಾಂತೇಶ್, ಶಿವರಾಜ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net