

ಚಿತ್ರದುರ್ಗ: ಶಿಕ್ಷಕರ ವರ್ಗಾವಣೆ ಕರಡು ಪಟ್ಟಿಯಲ್ಲಿ ಅಂಗವಿಕಲ ಶಿಕ್ಷಕರಿಗೆ ಸಂಂಧಿಸಿದಂತೆ ಕಂಡು ಬಂದಿರುವ ಲೋಪ ದೋಷ ಸರಿಪಡಿಸುವಂತೆ ರಾಜ್ಯ ಅಂಗವಿಕಲ ನೌಕರರ ಸಂಘದ ಅಧ್ಯಕ್ಷ ಬೀರಪ್ಪ ಅಂಡಗಿ ಚಿಲವಾಡಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹೊಸ ಕರಡು ಪಟ್ಟಿಯಲ್ಲಿ, ಅಂಗವಿಕಲ ಶಿಕ್ಷಕರಿಗೆ ಸಂಬಂಧಿಸಿದಂತೆ, ಸೇವಾ ಅವಧಿಯಲ್ಲಿ ಇವರಿಗೆ ಒಂದು ಆದ್ಯತೆ ನಿಯಮ ಅಳವಡಿಸಿದ್ದು, ಇದು 2016ರ ಅಂಗವಿಕಲ ಕಾಯ್ದೆಗೆ ವಿರುದ್ದವಾಗಿದೆ. ಈ ಶಿಕ್ಷಕರಿಗೆ ಪ್ರತಿ ವರ್ಷ ವರ್ಗಾವಣೆಗೆ ಅವಕಾಶ ಕೊಡುವುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ.