ಅರಣ್ಯಕ್ಕೆ ಬೆಂಕಿ, ಇಬ್ಬರ ಬಂಧನ

CTD 10 benki
Published on

ಚಿತ್ರದುರ್ಗ: ತಾಲೂಕಿನ ಜೋಗಿಮಟ್ಟಿ ವನ್ಯಜೀವಿಧಾಮಕ್ಕೆ ಶುಕ್ರವಾರ ಮಧ್ಯಾಹ್ನ ಬೆಂಕಿ ಇಟ್ಟಿದ್ದ ದುಷ್ಕರ್ಮಿಗಳಿಬ್ಬರನ್ನು ಅರಣ್ಯ ಇಲಾಖೆ ಬಂಧಿಸಿದೆ.

ಶಿವಣ್ಣ, ವೆಂಕಟ ಈ ಇಬ್ಬರು ಅರಣ್ಯಕ್ಕೆ ಬೆಂಕಿ ಹಚ್ಚುವ ಸಮಯದಲ್ಲೇ ಬೆನ್ನಟ್ಟಿ ಬಂಧಿಸಲಾಗಿದೆ ಎಂದು ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಕೆನ್ನಡಲು ಶಾಖೆಯ ವಲಯ ಅರಣ್ಯಾಧಿಕಾರಿ ಸಂದೀಪ್ ನಾಯಕ ತಿಳಿಸಿದ್ದಾರೆ.

ಉಪ ವಲಯ ಅರಣ್ಯಾಧಿಕಾರಿ ಟಿ.ಬಿ.ರುದ್ರಮುನಿ, ಪ್ರದೀಪ್ ಕೇಸರಿ, ಅರಣ್ಯರಕ್ಷಕ ವೆಂಕಟೇಶ್, ಪೈರ್ ವಾಚರ್ ಲಕ್ಷ್ಣಣ್ ಕಾರ್ಯಾಚರಣೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net