ರೈತ, ಸೈನಿಕ ದೇವರಿಗೆ ಸಮ

CTD 14 SRI MADARA CHENNAYA SRI
Published on

ಚಿತ್ರದುರ್ಗ: ದೇಶದಲ್ಲಿ ದೇವರ ನಂತರದಲ್ಲಿ ಪೂಜೆ ಸಲ್ಲಿಸಬೇಕಿರುವುದು ರೈತ ಹಾಗೂ ಸೈನಿಕರಿಗೆ ಎಂದು ಮಾದಾರ ಗುರುಪೀಠದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು.

ಪುಲ್ವಾಮಾ ಹುತಾತ್ಮ ಯೋಧರ ಸ್ಮರಣಾರ್ಥ ಕಂಥಕ ಫೌಂಡೇಶನ್ ನಗರದ ಒನಕೆ ಓಬವ್ವ ವೃತ್ತ ಸಮೀಪ ಶುಕ್ರವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪುಲ್ವಾಮಾ ದಾಳಿಯಲ್ಲಿ ನಮ್ಮ ಯೋಧರು ವೀರ ಮರಣ ಹೊಂದಿದ್ದಾರೆ. ಅವರ ಸ್ಮರಣೆ ಭಾರತೀಯರ ಕರ್ತವ್ಯವಾಗಿದ್ದು, ಫೌಂಡೇಶನ್ ಈ ಕಾರ್ಯ ಶ್ಲಾಘನೀಯ ಎಂದರು.

ದೇಶ, ಭಾಷೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕಿದೆ. ಕೃಷಿಕರ ಶ್ರಮದಿಂದ ಆಹಾರ ಸಿಗುತ್ತಿದೆ. ಯೋಧರು ಬಿಸಿಲು ಚಳಿಗಾಳಿ ಎನ್ನದೇ ದೇಶ ಕಾಯುತ್ತಾರೆ. ಆದ್ದರಿಂದ ರೈತ, ಸೈನಿಕರನ್ನು ಗೌರವಿಸುವುದನ್ನು ನಾವು ಮರೆಯಬಾರದು ಎಂದು ತಿಳಿಸಿದರು.

ಕಂಥಕ ಫೌಂಡೇಶನ್ ಮುಖ್ಯಸ್ಥೆ ಎನ್.ಬಿ.ಭಾರ್ಗವಿ ದ್ರಾವಿಡ್, ವಿ.ಎಸ್.ಅಜಯ್, ಪಿ.ಮಣಿಕಂಠ, ಅಮೂಲ್ಯ, ಚಿರಂಜೀವಿ, ದೀಪಿಕಾ, ಕಾವ್ಯಾ, ನವೀನ್ ದ್ರಾವಿಡ್, ಹೆಂಜೆರಪ್ಪ, ಜೀತೇಂದ್ರ, ದಗ್ಗೆ ಶಿವಪ್ರಕಾಶ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net