ನ್ಯಾಯಾಲಯಕ್ಕೆ ಬರಲು ವಿನಾಯಿತಿ

ctd 18 court carona 2
Published on

ಚಿತ್ರದುರ್ಗ: ಕರೊನಾ ಸೋಂಕು ಹಿನ್ನೆಲೆಯಲ್ಲಿ ನ್ಯಾಯಾಲಯ ಆವರಣದಲ್ಲಿ ಕಕ್ಷಿದಾರರು, ವಕೀಲರು ಹಾಗೂ ಅಧಿಕಾರಿ, ಸಿಬ್ಬಂದಿಯ ಆರೋಗ್ಯ ತಪಾಸಣೆಗೆ ಬುಧವಾರ ಚಾಲನೆ ನೀಡಲಾಯಿತು.

ಥರ್ಮೋಸ್ಕ್ರಿನಿಂಗ್ ಮೂಲಕ ಪರೀಕ್ಷಿಸಿ ಕೆಮ್ಮು, ನೆಗಡಿ, ಜ್ವರವಿದ್ದ 10 ಪ್ರಕರಣಗಳ ಕುರಿತು ಈ ವೇಳೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲಾಯಿತು.

ಇನ್ನು ಹಲವು ದಿನಗಳ ಕಾಲ ತಪಾಸಣೆ ಮುಂದುವರಿಯಲಿದೆ. ಈ ಸಂಬಂಧ ಬಸವೇಶ್ವರ ಆಸ್ಪತ್ರೆ ವೈದ್ಯ ಸಿಬ್ಬಂದಿ ನಿಯೋಜಿಸಲಾಗಿದೆ.

ಶಂಕಿತ ಸೋಂಕಿರುವ ಕಕ್ಷಿದಾರರಿದ್ದಲ್ಲಿ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ಅವರಿಗೆ ವಿನಾಯಿತಿ ನೀಡಲಾಗುವುದು. ಕೈದಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲು ಕಾರಾಗೃಹ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು. ಕಾನೂನು ಸೇವಾ ಪ್ರಾಧಿಕಾರ ಸದಸ್ಯರು, ವಕೀಲರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net