ಕಣಿವೆ ಮಾರಮ್ಮ ದೇವಿ ಮೆರವಣಿಗೆ

CTD KANIVE 12
Published on

ಚಿತ್ರದುರ್ಗ: ಶುಕ್ರವಾರ ನಡೆಯುವ ಶ್ರೀ ಕಣಿವೆ ಮಾರಮ್ಮ ಜಾತ್ರೆ ಅಂಗವಾಗಿ ನಗರ ಪೊಲೀಸ್ ಠಾಣೆ ಆವರಣದಲ್ಲಿರುವ ಶ್ರೀ ಕಣಿವೆ ಮಾರಮ್ಮ ದೇವಿಯ ಮೆರವಣಿಗೆ ಗುರುವಾರ ನಗರದಲ್ಲಿ ಅದ್ದೂರಿಯಾಗಿ ನಡೆಯಿತು.

ಅಲಂಕೃತ ಸಾರೋಟಿನಲ್ಲಿ ದೇವಾಲಯದಿಂದ ಹೊರಟ ಮೆರವಣಿಗೆ ಬಸವಮಂಟಪ, ರಂಗಯ್ಯನಬಾಗಿಲು, ದೊಡ್ಡಪೇಟೆ, ಉಚ್ಚಂಗಿಯಲ್ಲಮ್ಮ ದೇವಾಲಯ ಹಾದು ಆನೆಬಾಗಿಲು, ಗಾಂಧಿವೃತ್ತ, ಎಸ್‌ಬಿಎಂ ವೃತ್ತದಿಂದ ದೇವಸ್ಥಾನಕ್ಕೆ ಹಿಂದಿರುಗಿತು.

ಬ್ರಾಸ್‌ಬ್ಯಾಂಡ್, ಹುರಿಮೆ, ಡೋಲಕ್, ತಮಟೆ ಹಾಗೂ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಕಳೆತಂದುಕೊಟ್ಟವು. ಮಾರ್ಗದುದ್ದಕ್ಕೂ ಭಕ್ತರು ದೇವಿಗೆ ಭಕ್ತಿ ಸಮರ್ಪಿಸಿದರು.

ಇಂದು ಅನ್ನಸಂತರ್ಪಣೆ: ನಗರ ಪೊಲೀಸ್ ಠಾಣೆ ಕಣಿವೆ ಮಾರಮ್ಮನ ದೇವಾಲಯ ಆವರಣವನ್ನು ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಶುಕ್ರವಾರ ಬೆಳಗ್ಗೆ 11.30ರಿಂದ ಆರಂಭವಾಗಲಿರುವ ಅನ್ನಸಂರ್ಪಣೆಗಾಗಿ ತಾಲೂಕು ಕಚೇರಿ ಮುಂಭಾಗ ವ್ಯವಸ್ಥೆ ಮಾಡಲಾಗಿದೆ. ಅಕ್ಕಿ, ಬೇಳೆ, ಬೆಲ್ಲ, ಎಣ್ಣೆ, ದವಸ, ಧಾನ್ಯಗಳನ್ನು ನೀಡುವಂಥ ಭಕ್ತರು ದೇವಾಲಯದಲ್ಲಿ ಕೊಟ್ಟು ರಶೀದಿ ಪಡೆಯುವಂತೆ ದೇವಾಲಯ ಸಮಿತಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಮೊ.8197731708 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net