23ಕ್ಕೆ ವಿಜ್ಞಾನ ಪರಿಷತ್ ಚುನಾವಣೆ

CTD 8 KSVP
Published on

ಚಿತ್ರದುರ್ಗ: ರಾಜ್ಯ ವಿಜ್ಞಾನ ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗಾಗಿ ಫೆ.23ರಂದು ಚುನಾವಣೆ ನಡೆಯಲಿದೆ.

ಅಂದು ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 281 ಹಾಗೂ ಬೆಂಗಳೂರು ವಿಭಾಗದ 10 ಜಿಲ್ಲೆಗಳಲ್ಲಿ 2310 ಮತಗಳಿವೆ.

ಚಿತ್ರದುರ್ಗ ಗುರುಭವನ, ಚಳ್ಳಕೆರೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಕೇಂದ್ರಗಳಲ್ಲಿ ಮತದಾನ ನಡೆಯಲಿದೆ. ರಾಜ್ಯದ ನಾಲ್ಕು ಕಂದಾಯ ವಿಭಾಗಗಳಿಂದ ತಲಾ ಆರು ಸದಸ್ಯರಂತೆ 24 ಸದಸ್ಯರ ಆಯ್ಕೆ ಆಗಬೇಕಿದೆ.

ಚುನಾವಣೆ ಕುರಿತು ಹಾಗೂ ಬೆಂಗಳೂರು ವಿಭಾಗದಲ್ಲಿ ಸ್ಪರ್ಧಿಸಿರುವ ಅವರ ತಂಡದ ಅಭ್ಯರ್ಥಿಗಳ ಕುರಿತಂತೆ ಶನಿವಾರ ಸುದ್ದಿಗೋಷ್ಠಿಯಲ್ಲಿ ವಿಜ್ಞಾನ ಪ್ರಚಾರಕ ಡಾ.ಹುಲಿಕಲ್ ನಟರಾಜ್ ಮಾಹಿತಿ ನೀಡಿದರು.

ಎಚ್‌ಎಸ್‌ಟಿ ಸ್ವಾಮಿ, ಬಿ.ಎನ್.ಶ್ರೀನಾಥ್, ಶಿವಕುಮಾರ್, ಎಂ.ಎನ್.ಮುಷ್ಟೂರಪ್ಪ, ಪಿ.ಎಸ್.ಕೌಶಿಕ್, ಚಳ್ಳಕೆರೆ ಯರ‌್ರಿಸ್ವಾಮಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net