

ಚಿತ್ರದುರ್ಗ: ರಾಷ್ಟ್ರೀಯ ಶ್ರೀ ಸಿದ್ದರಾಮೇಶ್ವರ ಯುವ ವೇದಿಕೆ,ಮಾತೃಶ್ರೀ ದಾರಿ ದೀಪ ಫೌಂಡೇಶನ್‌ನಿಂದ ಗುರುವಾರ ಚಿತ್ರದುರ್ಗ ನಗರ ಹಾಗೂ ಗ್ರಾಮೀಣ ಪ್ರದೇಶದ ವಿವಿಧೆಡೆ, ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಬಡ ಕುಟುಂಬಗಳಿಗೆ ಆಹಾರದ ಕಿಟ್‌ಗಳನ್ನು ವಿತರಿಸ ಲಾಯಿತು.
ವೇದಿಕೆ ಪ್ರಮುಖರಾದ ಕೊತ್ತೂರು ಹನುಮಂತರಾಯಪ್ಪ, ತಿಮ್ಮಣ್ಣ ಗಾಡಿವಡ್ಡರ್,ಆರ್.ಎಲ್.ರಾಜೇಶ್,ಮೀಸೆ ರಂಗಣ್ಣ, ಮಂಜುಳಾ,ಎಚ್.ಆರ್. ಸಂತೋಷ್‌ಕುಮಾರ್,ಗಂಗಾಧರ್‌ಬಾಬು,ಎನ್.ಪಿ.ಭಾರತ್,ವೇಣುಗೋಪಾಲ್,ಮಂಜುನಾಥ್,ಪ್ರೇಮ್ ಕುಮಾರ್, ಡಾಕ್ಟರ್ ಕಲ್ಲೇಶ್ ಮೌರ್ಯ ಮತ್ತಿತರರ ಇದ್ದರು.