ಹೂ ಬೆಳೆಗಾರರಿಗೆ ಪರಿಹಾರ ವಿತರಣೆ

SAVITHA G THOTAGARIKE ILAKE, ctd
Published on

ಚಿತ್ರದುರ್ಗ: ಕೋವಿಡ್-19 ಲಾಕ್‌ಡೌನ್‌ನಿಂದಾಗಿ ನಷ್ಟ ಅನುಭವಿಸಿರುವ ಜಿಲ್ಲೆಯ ಸಾವಿರಾರು ಹೂವಿನ ಬೆಳೆಗಾರರ ಪೈಕಿ ಮೊದಲ ಹಂತದಲ್ಲಿ 1764 ಫಲಾನುವಿಗಳಿಗೆ ತೋಟಗಾರಿಕೆ ಇಲಾಖೆ ಅಂದಾಜು 1.20 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿದೆ.

ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪರಿಹಾರ ಜಮಾ ಆಗಲಿದೆ. ಈ ಅರ್ಹರ ಪೈಕಿ 102 ಬೆಳೆಗಾರರ ಬ್ಯಾಂಕ್ ಖಾತೆ, ಜಂಟಿ ಖಾತೆ ಅಥವಾ ಪಾಲು ಪಟ್ಟಿ ತೊಂದರೆಯಿದ್ದು, ಅವರಿಗೂ ಶೀಘ್ರ ಪರಿಹಾರ ಜಮಾ ಆಗಲಿದೆ.

ಹೂವಿನ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಆರ್ಥಿಕ ನೆರವು ನೀಡಲು ಸರ್ಕಾರ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಮೊದಲ ಹಂತದಲ್ಲಿ ಮುಂಗಾರು, ಹಿಂಗಾರು ಬೆಳೆ ಸಮೀಕ್ಷೆಗಳ ಪಟ್ಟಿಯಲ್ಲಿ ಹೆಸರು ಇರುವಂಥ ರೈತರಿಗೆ ಪರಿಹಾರ ವಿತರಿಸುತ್ತಿದೆ.

ಪಟ್ಟಿಯಲ್ಲಿ ಹೆಸರಿಲ್ಲದೇ ಇರುವಂಥ ಬೆಳೆಗಾರರಿಂದಲೂ ಮೇ 30ರೊಳಗೆ ಅರ್ಜಿ ಆಹ್ವಾನಿಸಲಾಗಿತ್ತು. ಜಿಲ್ಲೆಯಲ್ಲಿ ಚಿತ್ರದುರ್ಗ 966 ಹೆ. ವಿಸ್ತೀರ್ಣದಲ್ಲಿ ಹೂವಿನ ಬೆಳೆ ನಷ್ಟವಾಗಿದ್ದು, ಪರಿಹಾರಕ್ಕಾಗಿ 2.41 ಕೋಟಿ ರೂ. ಬೇಕಾಗ ಬಹುದೆಂದು ಅಂದಾಜಿಲಾಗಿತ್ತು. ಆದರೆ, ಮುಂಗಾರು (1213.19ಹೆ.) ಹಾಗೂ ಹಿಂಗಾರು (1195.02ಹೆ.) ಸಮೀಕ್ಷೆಯಲ್ಲಿರುವಂತೆ ಜಿಲ್ಲೆಯಲ್ಲಿ 2408.93 ಹೆ.ಹೂವಿನ ಬೆಳೆ ನಷ್ಟವಾಗಿದ್ದು, ರಾಜ್ಯ ಸರ್ಕಾರ ಜಿಲ್ಲೆಗೆ ಪ್ರಸ್ತುತ 2.84 ಕೋಟಿ ರೂ. ಬಿಡುಗಡೆ ಮಾಡಿದೆ.

ಹಣ್ಣು-ತರಕಾರಿ ಬೆಳೆಗಾರರಿಗೆ ಪರಿಹಾರ: ಹಣ್ಣು, ತರಕಾರಿ ನಷ್ಟ ಅನುಭವಿದ ಬೆಳೆಗಾರರಿಗೆ ಒಂದು ಹೆ.ಗೆ ಗರಿಷ್ಠ 15 ಸಾವಿರ ರೂ.ಪರಿಹಾರ ವಿತರಿಸಲಾಗುತ್ತದೆ. ಸಮೀಕ್ಷೆಗಳಲ್ಲಿ ಇರುವಂತೆ ಸದ್ಯಕ್ಕೆ ಜಿಲ್ಲಾದ್ಯಂತ 22829 ಫಲಾನುಭವಿಗಳನ್ನು ಗುರುತಿಸಲಾಗಿದೆ. 28611.11 ಹೆ. ವಿಸ್ತೀರ್ಣದಲ್ಲಿ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸಮೀಕ್ಷೆಗಳಲ್ಲಿ ಹೆಸರಿಲ್ಲದೇ ಇರುವಂಥ ರೈತರಿಂದ ಜೂ.20ವರೆಗೆ ಅರ್ಜಿಗಳನ್ನು ಇಲಾಖೆ ಸ್ವೀಕರಿಸಿದೆ.

ಮೊಳಕಾಲ್ಮೂರು-320

ಹೊಸದುರ್ಗ-1526

ಹೊಳಲ್ಕೆರೆ-584

ಹಿರಿಯೂರು-2624

ಚಳ್ಳಕೆರೆ-2470

ಚಿತ್ರದುರ್ಗ-3018

ತಾಲೂಕು-ಅರ್ಜಿ ಸಲ್ಲಿಸಿರುವ ಬೆಳೆಗಾರರ ಸಂಖ್ಯೆ

ಸಮೀಕ್ಷೆಗಳ ಪಟ್ಟಿಯಲ್ಲಿ ಹೆಸರಿಲ್ಲದೇ ಇರುವಂಥ ಹೂವಿನ ಬೆಳೆಗಾರ ವಿವರ

ಮೊಳಕಾಲ್ಮೂರು-118-829-166.04-814.08

ಹೊಸದುರ್ಗ-1027-617-832-349.6

ಹೊಳಲ್ಕೆರೆ-337-138-200.12-78.34

ಹಿರಿಯೂರು-1714-6071-1678.21-5467.86

ಚಳ್ಳಕೆರೆ-550-7364-660.92-14418.96

ಚಿತ್ರದುರ್ಗ-362-3702-268-3676.98

ತಾಲೂಕು-ಹಣ್ಣಿನ ಬೆಳೆಗಾರರು, ತರಕಾರಿ ಬೆಳೆಗಾರರು, ಹಣ್ಣಿನ ವಿಸ್ತೀರ್ಣ, ತರಕಾರಿ ವಿಸ್ತೀರ್ಣ (ಹೆ.)

ಸಮೀಕ್ಷೆಗಳ ಪಟ್ಟಿಯಲ್ಲಿ ಹೆಸರು ಇರುವಂಥ ಹಣ್ಣು, ತರಕಾರಿ ಬೆಳೆಗಾರರ ವಿವರ

ಲಾಕ್‌ಡೌನ್ ಅವಧಿ ನಂತರದ ಬೆಳೆ ನಷ್ಟಕ್ಕೆ ಪರಿಹಾರ ವಿತರಿಸುವುದಿಲ್ಲ. ಸಮೀಕ್ಷೆ ವೇಳೆ ಜಮೀನಲ್ಲಿರುವ ಪ್ರಮುಖ ಬೆಳೆ ನಮೂದಾಗಿದ್ದು, ಅಲ್ಲಿ ಬೆಳೆದಿದ್ದ ಹೂವಿನ ಹೆಸರಿಲ್ಲದಿದ್ದರೆ ಅಂಥ ಬೆಳೆಗಾರರಿಗೆ ಪರಿಹಾರ ಸಿಕ್ಕಿಲ್ಲ. ಆದರೂ ಸಮೀಕ್ಷೆಗಳ ಪಟ್ಟಿಯಲ್ಲಿ ಹೆಸರಿಲ್ಲದೇ ಇರುವಂಥ 10542 ರೈತರು ಪರಿಹಾರವನ್ನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳನ್ನು ತಹಸೀಲ್ದಾರ್‌ಗಳ ನೇತೃತ್ವದ ಸಮಿತಿ ಪರಿಶೀಲಿಸಿ ಜಿಲ್ಲಾಧಿಕಾರಿಗೆ ಕಳಿಸಲಿದೆ.
ಜಿ.ಸವಿತಾ ಡಿಡಿ
ತೋಟಗಾರಿಕೆ ಇಲಾಖೆ, ಚಿತ್ರದುರ್ಗ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net