ಚಿತ್ರದುರ್ಗ-ಶಿರಡಿ ನಡುವೆ ಮತ್ತೆ ರೈಲು ಸಂಚಾರ

CTD RAIL
Published on

ಚಿತ್ರದುರ್ಗ : ಕೆಲ ಕಾರಣಗಳಿಂದಾಗಿ ಸ್ಥಗಿತಗೊಂಡಿದ್ದ ಮೈಸೂರು-ಶಿರಡಿ ಸಾಯಿನಗರ ನಡುವಿನ ರೈಲು ಸಂಚಾರ ಮತ್ತೆ ಆರಂಭವಾಗಿದೆ.

ಮೈಸೂರಿಂದ ಭಾನುವಾರ ಸಂಜೆ 5.30 ಕ್ಕೆ ರೈಲು ಹೊರಡಲಿದೆ. ಸೋಮವಾರ ಮಧ್ಯಾಹ್ನ 12.35 ಚಿತ್ರದುರ್ಗದಿಂದ ಹೊರಟು ಶಿರಡಿ ಸಾಯಿ ನಗರವನ್ನು ಮಂಗಳವಾರ ಬೆಳಗ್ಗೆ 11.15ಕ್ಕೆ ಸೇರಲಿದೆ.

ಅಲ್ಲಿಂದ 11.55ಕ್ಕೆ ಹೊರಡುವ ರೈಲು ಚಿತ್ರದುರ್ಗಕ್ಕೆ ಬುಧವಾರ ಬೆಳಗ್ಗೆ 7.30ಕ್ಕೆ ಬರಲಿದೆ. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ರೈಲ್ವೆ ಹೋರಾಟ ಸಮಿತಿ ಸದಸ್ಯ ಡಿ.ಆರ್.ಓಂಪ್ರಕಾಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net