ಸರ್ಕಾರ ಆದೇಶಕ್ಕೆ ಕುರುಬರ ಸಂಘ ಆಕ್ಷೇಪ

RAJANI R LEPAKSHA
Published on

ಚಿತ್ರದುರ್ಗ: ಕುರಿ, ಮೇಕೆಗಳ ಆಕಸ್ಮಿಕ ಸಾವಿಗೆ ಈವರೆಗೆ ಕೊಡುತ್ತಿದ್ದ ಪರಿಹಾರಕ್ಕೆ ಇನ್ನು ಮುಂದೆ ಅರ್ಜಿ ಸ್ವೀಕರಿಸಬಾರದು ಎಂಬ ರಾಜ್ಯ ಸರ್ಕಾರ ಆದೇಶದ ವಿರುದ್ಧ ರಾಜ್ಯ ಪ್ರದೇಶ ಕುರುಬರ ಸಂಘದ ಸದಸ್ಯೆ ಆರ್.ರಜನಿ ಲೇಪಾಕ್ಷ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಆದೇಶ ಕುರಿಗಾಹಿಗಳ ಬದುಕನ್ನು ಅತಂತ್ರ ಸ್ಥಿತಿಗೆ ನೂಕಲಿದೆ. ಬಡ ಮತ್ತು ಮಧ್ಯಮವರ್ಗದವರಿಗೆ ಆರ್ಥಿಕವಾಗಿ ಪ್ರಬಲ ಪೆಟ್ಟನ್ನು ಕೂಡಲಿದೆ. ಆದ್ದರಿಂದ ಈ ಹಿಂದೆ ಇದ್ದಂತೆ ಕುರಿ, ಮೇಕೆಗಳು ಆಕಸ್ಮಿಕ ಸಾವಿಗೆ ಸೂಕ್ತ ಪರಿಹಾರ ಕೊಡಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net