ನೆಟ್ಟ ಸಸಿಗಳ ಪೋಷಣೆಯೂ ಮುಖ್ಯ

CTD 5 dist parisara
Published on

ಚಿತ್ರದುರ್ಗ: ಸಸಿಗಳನ್ನು ನೆಡುವುದರ ಜತೆ ಅವುಗಳನ್ನು ಸರಿಯಾಗಿ ಪೋಷಿಸಿ ಬೆಳೆಸುವುದು ಮುಖ್ಯವೆಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ಗಾಯತ್ರಿ ಕಲ್ಯಾಣ ಮಂಟಪ ರಸ್ತೆಯಲ್ಲಿ ಜಿಲ್ಲಾಡಳಿತ, ಅರಣ್ಯ ಇಲಾಖೆ, ನಗರಸಭೆ ಹಾಗೂ ಟಾರ್ಗೆಟ್ ಟೆನ್‌ಥೌಸಂಡ್ ಸಹಯೋಗದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಗರದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಗಳು ಇನ್ನು ವರ್ಷ ಮುಂದುವರೆಯಲಿದ್ದು, ಈ ಹಿನ್ನೆಲೆಯಲ್ಲಿ ಅನೇಕ ಮರಗಳನ್ನು ತೆರವು ಗೊಳಿಸಲಾಗಿದೆ. ಆದ್ದರಿಂದ ರಸ್ತೆ ವಿಸ್ತರಣೆ ಪೂರ್ಣಾಗೊಂಡ ಬಳಿಕ ಸರ್ಕಾರಿ ಕಚೇರಿ, ಮನೆ ಸುತ್ತಮುತ್ತ ಸಹಿತ ನಗರದ ವಿವಿಧೆಡೆ ಗಿಡ ನೆಡಲಾಗುವುದು ಎಂದರು.

ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಮಾತನಾಡಿ, ಎಲ್ಲರೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಗಿಡಮರಗಳಿದ್ದರೆ ಮಳೆ,ಬೆಳೆ ಸಾಧ್ಯ ಎಂದರು.

ಡಿಸಿ ಆರ್.ವಿನೋತ್ ಪ್ರಿಯಾ, ಜಿಪಂ ಸಿಇಒ ಎಸ್.ಹೊನ್ನಾಂಬಾ, ಎಸ್ಪಿ ಜಿ.ರಾಧಿಕಾ, ಡಿಎಫ್‌ಒಗಳಾದ ಚಂದ್ರಶೇಖರ್ ನಾಯಕ, ಎನ್.ಕೆ. ಚೋಳರಾಜಪ್ಪ, ಎಸಿಎಫ್‌ಗಳಾದ ಮಂಜುನಾಥ್, ರಾಘವೇಂದ್ರ, ಆರ್‌ಎಫ್‌ಒಗಳಾದ ಸಂದೀಪ್ ನಾಯಕ, ಅಕ್ಷತಾ, ಮಂಜು ಳಮ್ಮ, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ.ವಿ.ಸದಾಶಿವ, ಪಿಡಬ್ಲುೃಡಿ ಇಇ ಸತೀಶ್, ನಗರಸಭೆ ಆಯುಕ್ತ ಜಿ.ಟಿ.ಹನುಮಂತರಾಜು ಮತ್ತಿತರರ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net