27ರಂದು ಯೋಧರಿಗೆ ಗೌರವ ಸಮರ್ಪಣೆ

VEERENDRA PAPPI
Published on

ಚಿತ್ರದುರ್ಗ: ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಸೇನೆ, ಸ್ವಾತಂತ್ರ್ಯಯೋಧ ವೀರ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನ ಅಂಗವಾಗಿ ಜ.27ರಂದು ಸಂಜೆ 5ಕ್ಕೆ ತರಾಸು ರಂಗಮಂದಿರದಲ್ಲಿ ಯೋಧರಿಗೆ ಹಾಗೂ ಯೋಧರ ಕುಟುಂಬಗಳಿಗೆ ಗೌರವ ಸಮರ್ಪಿಸಲಿದೆ.

ರಾಯಣ್ಣನ ಹೋರಾಟ ಸ್ಮರಣೆ ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ. ಯುವ ನಟ ಬದ್ರಿ, ವಿರಾಟ ಪರ್ವ ಹಾಗೂ ಟರ್ನ್-2 ಚಿತ್ರ ತಂಡದ ನಾಯಕ, ನಟಿಯರ ಸಹಿತ ಸಿನಿ ಕಲಾವಿದರು ಪಾಲ್ಗೊಳ್ಳ ಲಿದ್ದಾರೆ. ಬೆಮೆಲ್ ಕಂಪಲಪ್ಪ ತಂಡದಿಂದ ಹಾಸ್ಯ ಸಂಜೆ ಇರುತ್ತದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಉಚಿತ ಪಾಸ್ ವ್ಯವಸ್ಥೆ ಮಾಡಿದ್ದು, 8105499543, 7975137969 ಸಂಪರ್ಕಿಸಬಹುದು. ಇದೇ ವೇಳೆ ಪಾಸ್ ಕೂಪನ್‌ಗಳ ಲಕ್ಕಿಡಿಫ್ ಮೂಲಕ ಅದೃಷ್ಟವಂಥ ಸಭಿಕರನ್ನು ಸ್ಥಳದಲ್ಲೇ ಆಯ್ಕೆ ಮಾಡಿ ಗೌರವಿಸಲಾಗುತ್ತಿದೆ.

ಜೆಡಿಎಸ್ ಮುಖಂಡ ಕೆ.ಸಿ.ವಿರೇಂದ್ರ ಪಪ್ಪಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮದಕರಿ ವ್ಯಾಯಾಮ ಶಾಲೆ ಅಧ್ಯಕ್ಷ ಎಸ್.ಶ್ರೀ ರಾಮ್ ಅಧ್ಯಕ್ಷತೆ ವಹಿಸಲಿದ್ದಾರೆ. ನಗರಸಭೆ ಮಾಜಿ ಸದಸ್ಯ ಎಸ್‌ಬಿಎಲ್ ಮಲ್ಲಿಕಾರ್ಜುನ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೆ.ನಾಗರಾಜ್, ನಗರಸಭೆ ಆಯುಕ್ತ ಜಿ.ಟಿ.ಹನುಮಂತರಾಜು, ಸಿಪಿಐ ಪ್ರಕಾಶ್, ಮುಖಂಡರಾದ ಕೆ.ಟಿ.ಶಿವಕುಮಾರ್, ಬಿ.ಎಚ್.ಗೌಡ್ರು, ಬಿ.ಟಿ. ಜಗದೀಶ್, ಪೃಥ್ವಿರಾಜ್, ರಾಜೇಶ್ ಮಧುರೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಎಂದು ಸೇನೆ ಅಧ್ಯಕ್ಷ ಟಿ.ಆನಂದ್, ಕಾರ್ಯದರ್ಶಿ ರಾಘವೇಂದ್ರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net