

ಚಿತ್ರದುರ್ಗ: ಈವರೆಗೆ 58.72 ಕೋಟಿ ರೂ. ರಾಜಸ್ವ ತೆರಿಗೆಯನ್ನು ಸಂಗ್ರಹಿಸುವ ಮೂಲಕ ಶಿವಮೊಗ್ಗ ಸಾರಿಗೆ ವಿಭಾಗದಲ್ಲೇ ಚಿತ್ರದುರ್ಗ ಆರ್‌ಟಿಒ ಮೊದಲ ಸ್ಥಾನದಲ್ಲಿದೆ.
ಪ್ರಸಕ್ತ ಸಾಲಿನಲ್ಲಿ 78.01 ಕೋಟಿ ರೂ. ಸಂಗ್ರಹದ ಗುರಿ ಇದೆ. 2019 ಡಿಸೆಂಬರ್ ಅಂತ್ಯದವರೆಗೆ 58.50 ಕೋಟಿ ರೂ. ಗುರಿ ಪೈಕಿ, 58.72 ಕೋಟಿ ರೂ. ಸಂಗ್ರಹವಾಗಿದೆ.
ದಂಡ ವಸೂಲಿ: ಡಿಸೆಂಬರ್ ಅಂತ್ಯದವರೆಗೆ 41,212 ವಾಹನಗಳ ತಪಾಸಣೆ ನಡೆಸಿ ನಿಯಮ ಉಲ್ಲಂಘಿಸಿದ ವಾಹನ ಚಾಲಕರ ವಿರುದ್ಧ 3776 ಪ್ರಕರಣ ದಾಖಲಿಸಲಾಗಿದೆ. 14 ವಾಹನ ವಶಕ್ಕೆ ಪಡೆದು, 2.30 ಕೊಟಿ ರೂ. ದಂಡ ಹಾಗೂ ತೆರಿಗೆ ವಸೂಲಿ ಮಾಡಲಾಗಿದೆ.
ಕಳೆದ ವರ್ಷ 15428 ವಾಹನಗಳನ್ನು ತಪಾಸಣೆ ನಡೆಸಿ 6.16 ಕೋಟಿ ರೂ. ದಂಡ ಹಾಗೂ ತೆರಿಗೆ ವಸೂಲಿ ಆಗಿತ್ತು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್.ಹೆಗಡೆ ತಿಳಿಸಿದ್ದಾರೆ.