14 ಜನರ ಗಂಟಲು ದ್ರವ ಪ್ರಯೋಗಾಲಯಕ್ಕೆ

DC VINOD PRIYA (1)
Published on

ಚಿತ್ರದುರ್ಗ: ಕತಾರ್‌ನಿಂದ ಹಿರಿಯೂರಿಗೆ ಆಗಮಿಸಿದ್ದ 8 ಜನರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಡಿಸಿ ಆರ್.ವಿನೋತ್ ಪ್ರಿಯಾ ತಿಳಿಸಿದ್ದಾರೆ.

ಅಹಮದಬಾದ್‌ಗೆ ಹೋಗಿ ಬಂದಿರುವ ಚಳ್ಳಕೆರೆಯ 11 ಮಂದಿಯ ಪ್ರಯೋಗಾಲಯ ವರದಿಗೆ ಕಾಯಲಾಗುತ್ತಿದೆ. ಹೊಸದಿಲ್ಲಿ ನಿಜಾಮುದ್ದೀನ್ ಸಭೆಯಲ್ಲಿ ಭಾಗವಹಿಸಿದ್ದ ಒಬ್ಬರು ಹಾಗೂ ಆ ಪ್ರದೇಶದಲ್ಲಿದ್ದು ಇಲ್ಲಿಗೆ ಬಂದಿರುವ ಮತ್ತೊಬ್ಬರ ಸಹಿತ 14 ಜನರಗಂಟಲು ದ್ರವ ಮತ್ತು ರಕ್ತದ ಪರೀಕ್ಷೆಯನ್ನು ಶನಿವಾರ ಪ್ರಯೋಗಾಲಯಕ್ಕೆ ಕಳಿಸಲಾಗಿದೆ.

ಜಿಲ್ಲೆಯಲ್ಲಿ 33 ಜನರು ಹೋಮ್ ಕ್ವಾರಂಟೈನಲ್ಲಿ ಇದ್ದಾರೆ. 202 ಜನರು 14 ದಿನಗಳ ಅವಧಿ ಪೂರ್ಣಗೊಳಿಸಿದ್ದಾರೆ. ಈವರೆಗೆ 121 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರಲ್ಲಿ 90 ಜನರ ವರದಿ ನೆಗೆಟಿವ್ ಎಂದು ಬಂದಿದ್ದು, 17 ಜನರ ವರದಿಗೆ ಕಾಯಲಾಗುತ್ತಿದೆ. ಈವರೆಗೂ ಫಿವರ್ ಕ್ಲಿನಿಕ್‌ಗಳಲ್ಲಿ 2321 ಜನರು ತಪಾಸಣೆಗೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net