

ಚಿತ್ರದುರ್ಗ: ಜಿಲ್ಲೆಯ 500 ಶಾಲೆಗಳಲ್ಲಿ ಸ್ಥಾಪಿಸಿರುವ ಇಕೋ ಕ್ಲಬ್‌ಗಳ ಮೂಲಕ ಪರಿಸರ ಅರಿವು ಜನರಲ್ಲಿ ಮೂಡಿಬೇಕೆಂದು ಜಿಲ್ಲಾಧಿಕಾರಿ ಆರ್.ವಿನೋತ್‌ಪ್ರಿಯಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಇಕೋ ಕ್ಲಬ್ ಜಿಲ್ಲಾ ಅನುಷ್ಠಾನ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಮಾತನಾಡಿ, ಇಕೋಕ್ಲಬ್ ನಿರ್ವಹಣೆಗೆಂದು ಪ್ರತಿ ಶಾಲೆಗೆ ವರ್ಷಕ್ಕೆ 5 ಸಾವಿರ ರೂ. ಅನುದಾನ ನೀಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಉತ್ತಮ ಇಕೋ ಕ್ಲಬ್ ಶಾಲೆಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಬೇಕು. ಕ್ಲಬ್‌ಗಳ ಕಾರ್ಯ ಚಟುವಟಿಕೆಗಳ ಕುರಿತು ಪ್ರತಿ 3 ತಿಂಗಳಿಗೊಮ್ಮೆ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.
ಡಿವೈಪಿಸಿ ಸಿ.ಎಂ.ತಿಪ್ಪೇಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಮತ್ತೆ ಹೊಸದಾಗಿ 250 ಕ್ಲಬ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ 120 ಶಾಲಾ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ ಎಂದರು.
ಡಿಡಿಪಿಐ ಕೆ.ರವಿಶಂಕರ ರೆಡ್ಡಿ, ಎಸಿ ವಿ.ಪ್ರಸನ್‌ಕುಮಾರ್, ಎಡಿಸಿ ಸಿ.ಸಂಗಪ್ಪ, ತಹಸೀಲ್ದಾರ್ ಜೆ.ಸಿ.ವೆಂಟಕಟೇಶಯ್ಯ, ಸಮಿತಿ ಸದಸ್ಯರಾದ ಎಚ್.ಎಸ್.ಟಿ.ಸ್ವಾಮಿ, ಮಹೇಶ್ವರ ರೆಡ್ಡಿ, ನಾಗೇಂದ್ರಪ್ಪ, ಲೋಹಿತ್ ಇತರರಿದ್ದರು.