ಸಂಗಮೇಶ್ವರ ಬಡಾವಣೆ ಉದ್ಯಾನದಲ್ಲಿ ಬಯೊವೇಸ್ಟ್

ctd 19 mla
Published on

ಚಿತ್ರದುರ್ಗ: ಯಾವುದೇ ಉದ್ಯಾನಗಳಲ್ಲಿ ತ್ಯಾಜ್ಯ ಸುರಿಯುವ ಖಾಸಗಿ ಆಸ್ಪತ್ರೆಗಳ ಮಾಲೀಕರಿಗೆ ನೋಟಿಸ್ ಕೊಡಬೇಕೆಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ನಗರಸಭೆ ಆಯುಕ್ತರಿಗೆ ತಾಕೀತು ಮಾಡಿದರು.

ನಗರದ ಸಂಗಮೇಶ್ವರ ಬಡಾವಣೆ 2 ನೇ ಮುಖ್ಯರಸ್ತೆ ಶುಕ್ರವಾರ 70 ಲಕ್ಷ ರೂ.ವೆಚ್ಚದ ಸಿಸಿರಸ್ತೆ ಕಾಮಗಾರಿಯ ಗುದ್ದಲಿ ಪೂಜೆ ವೇಳೆ ಬಡಾವಣೆ ನಾಗರಿಕರ ಸಮಸ್ಯೆಗಳನ್ನು ಆಲಿಸಿದರು.

ಅಲ್ಲಿರುವ ಉದ್ಯಾನಕ್ಕೆ ಖಾಸಗಿ ಆಸ್ಪತ್ರೆಯವರು ತ್ಯಾಜ್ಯ ಹಾಕುತ್ತಿದ್ದಾರೆಂಬ ದೂರಿಗೆ ಸ್ಪಂದಿಸಿದ ಶಾಸಕರು, ಆಸ್ಪತ್ರೆಯವರಿಗೆ ನೋಟಿಸ್ ಕೊಡಿ, ತ್ಯಾಜ್ಯ ತೆಗೆಸಿ ಹಾಗೂ ಬಡಾವಣೆ ನೀರಿನ ಸಮಸ್ಯೆ ಬಗೆಹರಿಸಿ ಎಂದು ಆಯುಕ್ತ ಜೆ.ಟಿ.ಹನುಮಂತರಾಜು ಅವರಿಗೆ ತಿಳಿಸಿದರು. ನಗರಸಭೆ ಸದಸ್ಯದೀಪು, ಇಂಜಿನಿಯರ್ ಮನೋಹರ್, ಬ್ರಹ್ಮ ಕುಮಾರಿ ಈಶ್ವರೀಯ ವಿವಿ ಶಿವರಶ್ಮಿ, ಡಾ.ಜಿ.ಸಿದ್ದಾರ್ಥ, ಜಿ.ಪಂ.ಮಾಜಿ ಸದಸ್ಯ ರಾಜಾನಾಯ್ಕ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net