ಬಸ್ ಮಾಲೀಕರಿಂದ ಕಿಟ್ ವಿತರಣೆ

CTD 27 BUS
Published on

ಚಿತ್ರದುರ್ಗ: ಖಾಸಗಿ ಬಸ್‌ನ 700ಕ್ಕೂ ಹೆಚ್ಚು ಚಾಲಕರು, ನಿರ್ವಾಹಕರು, ಮೆಕಾನಿಕ್ ಹಾಗೂ ಏಜೆಂಟರಿಗೆ ವಿತರಿಸಲು ಅಗತ್ಯ ಆಹಾರ ಧಾನ್ಯಗಳ ಕಿಟ್‌ಗಳನ್ನು ಎಡಿಸಿ ಸಿ.ಸಂಗಪ್ಪ ಅವರಿಗೆ ಖಾಸಗಿ ಬಸ್ ಮಾಲೀಕರ ಸಂಘ ಸೋಮವಾ ಹಸ್ತಾಂತರಿಸಿತು.

ಸಂಘದ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ಕೋವಿಡ್ 19ರ ಲಾಕ್‌ಡೌನ್‌ನಿಂದಾಗಿ ಬಸ್ ಮಾಲೀಕರು ಆರ್ಥಿಕವಾಗಿ ನಷ್ಟವನ್ನು ಅನುಭವಿಸುತ್ತಿದ್ದಾರೆ. ಬಸ್ ಸಿಬ್ಬಂದಿ, ಸ್ಟಾೃಂಡ್ ಏಜೆಂಟರು, ಮೆಕಾನಿಕ್‌ಗಳ ಜೀವನ ನಿರ್ವಹಣೆ ಕೂಡ ಕಷ್ಟವಾಗಿದೆ ಎಂದರು.

ಸರ್ಕಾರ ತೆರಿಗೆಗೆ ಸಂಬಂಧಿಸಿದಂತೆ ಮಾಲೀಕರ ಬೇಡಿಕೆಗಳಿಗೆ ಸ್ಪಂದಿಸಬೇಕು ಹಾಗೂ ಸಂಕಷ್ಟದಲ್ಲಿ ಇರುವಂಥ ನೌಕರರಿಗೆ ನೆರವಾಗಬೇಕು ಎಂದು ಮನವಿ ಮಾಡಿದರು.

ಗಿರೀಶ್, ಆನಂದ್, ಜಿ.ಬಿ.ಶೇಖರ್, ನಾಗರಾಜ್, ಕೋಟ್ರೇಶ್ ಸೇರಿ ಸಂಘದ ನಾನಾ ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net