ಪ್ರಧಾನಿ ಮೌನವೂ ಅಗ್ರೆಸಿವ್

NARAYANA SWAMY MP
Published on

ಚಿತ್ರದುರ್ಗ: ಚೀನಾ ಗಡಿ ಕ್ಯಾತೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮೌನವನ್ನು ಗಮನಿಸಿದರೆ ಅವರು, ಚೀನಾದ ವಿರುದ್ಧ ಅತ್ಯಂತ ಅಗ್ರೆಸಿವ್ ಕ್ರಮಗಳಿಗೆ ಯೋಚಿಸುತ್ತಿದ್ದಾರೆಂದು ಸಂಸದ ಎ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಕ್ಷಣೆಯಂಥ ಸೂಕ್ಷ್ಮವಿಚಾರಗಳೆಡೆ ತಕ್ಷಣ ಪ್ರತಿಕ್ರಿಯೆ ಸಲ್ಲದು ಎಂದರು ಪ್ರಧಾನಿ ಮೌನ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕೆಗೆ ಪ್ರತಿಕ್ರಿಯಿಸಿದರು. ಭಾರತದ ಶಕ್ತಿ ಅತ್ಯಂತ ವೇಗವಾಗಿ ವೃದ್ಧಿಸಿದೆ. ಭಾರತ ವಿಶ್ವ ಶಾಂತಿಯನ್ನು ಬಯಸುತ್ತದೆ. ಆದರೆ, ಚೀನಾ ಸಹಿತ ತಂಟೆಕೋರ ದೇಶಗಳಿಗೆ ತಕ್ಕಪಾಠವನ್ನು ಕಲಿಸಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net