ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ

CTD ZP 30
Published on

ಚಿತ್ರದುರ್ಗ: ಜಾತಿ, ಪಕ್ಷ ಹೊರತುಪಡಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವಂತೆ ಜಿಪಂ ನೂತನ ಅಧ್ಯಕ್ಷೆ ಶಶಿಕಲಾ ಅವರಿಗೆ ನಗರಸಭೆ ಮಾಜಿ ಅಧ್ಯಕ್ಷ ಡಿ.ಮಲ್ಲಿಕಾರ್ಜುನ್ (ಪೊಲೀಸ್) ಮನವಿ ಮಾಡಿದರು.

ಜಿಪಂ ಕಚೇರಿಯಲ್ಲಿ ಶನಿವಾರ ಕನಕ ಪತ್ತಿನ ಸಹಕಾರ ಸಂಘದ ವತಿಯಿಂದ ಅಧ್ಯಕ್ಷರಿಗೆ ಗೌರವ ಸಲ್ಲಿಸಿ ಮಾತನಾಡಿ, ಅಧಿಕಾರ ಸಿಗುವುದು ಜನರ ಕೃಪೆಯಿಂದ. ಅವರ ಒಳಿತಿಗೆ ಕೆಲಸ ಮಾಡಿ, ಮಾದರಿ ಮಹಿಳೆ ಎಂಬ ಹೆಸರು ಪಡೆಯುವಂತೆ ಕಿವಿಮಾತು ಹೇಳಿದರು.

ಜಿಪಂ ಅನುದಾನವನ್ನು ತಾರತಮ್ಯವಿಲ್ಲದೆ ಸಮಗ್ರವಾಗಿ ಎಲ್ಲ ಕ್ಷೇತ್ರಗಳಿಗೆ ಹಂಚಿಕೆ ಮಾಡುವ ಜತೆಗೆ, ಹಳ್ಳಿಗಳಲ್ಲಿರುವ ಕುಡಿವ ನೀರು, ಸ್ವಚ್ಚತೆ, ಚರಂಡಿ ಸಮಸ್ಯೆ ಬಗೆಹರಿಸಲು ಶ್ರಮಿಸಬೇಕು. ಕರೊನಾದಿಂದ ಜಿಲ್ಲೆಯನ್ನು ಮುಕ್ತಗೊಳಿಸಲು ಜನರಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಮನವಿ ಮಾಡಿದರು.

ಬಳಿಕ ಮಾತನಾಡಿದ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು, ಜಿಲ್ಲೆಯಲ್ಲಿ ಹಿರಿಯ ರಾಜಕಾರಣಿಗಳು, ಅನುಭವಿ ಜನಪ್ರತಿನಿಧಿಗಳು ಇದ್ದಾರೆ. ಪಕ್ಷಾತೀತವಾಗಿ ಎಲ್ಲರ ಸಹಕಾರ ಪಡೆದು ಜಿಪಂ ಅನುದಾನ ಸದ್ಬಳಕೆ ಆಗುವಂತೆ ಜಾಗ್ರತೆ ವಹಿಸುತ್ತೇನೆ ಎಂದು ಭರವಸೆ ನೀಡಿದರು. ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶಬಾಬು ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net