ಪೊಲೀಸ್ ಹುದ್ದೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

SP RADHIKA
Published on

ಚಿತ್ರದುರ್ಗ: ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್‌ಟೇಬಲ್ ವೃಂದ ಹುದ್ದೆಗಳ ನೇರ ನೇಮಕ ಸಂಬಂಧ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿಯ ಕೊನೆ ದಿನಾಂಕವನ್ನು ವಿಸ್ತರಿಸಲಾಗಿದೆ. ಅರ್ಹತೆಯ ಷರತ್ತು, ವಯೋಮಿತಿಯಲ್ಲಿ ಬದಲಾವಣೆ ಇಲ್ಲ ಎಂದು ಎಸ್ಪಿ ಜಿ.ರಾಧಿಕಾ ತಿಳಿಸಿದ್ದಾರೆ.

ಸಿಪಿಸಿ ಕಲ್ಯಾಣ ಕರ್ನಾಟಕ- (ಹುದ್ದೆಗಳ ಸಂಖ್ಯೆ 558), ಎಪಿಸಿ ಕಲ್ಯಾಣ ಕರ್ನಾಟಕ-(444) ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ದಿನವನ್ನು ಜುಲೈ 9ಕ್ಕೆ, ಶುಲ್ಕ ಪಾವತಿಗೆ ಜು.13ಕ್ಕೆ ವಿಸ್ತರಿಸಲಾಗಿದೆ.

ಸಿಪಿಸಿ (2007), ಎಪಿಸಿ (1005) ಹುದ್ದೆಗಳಿಗೆ ಅರ್ಜಿಯನ್ನು ಜುಲೈ 13ರೊಳಗೆ ಸಲ್ಲಿಸಬಹುದು. ಜು.15ರೊಳಗೆ ಶುಲ್ಕ ಪಾವತಿಸಬಹುದು. ಸ್ಪೆ ಆರ್‌ಪಿಸಿ, ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ (2420), ಸ್ಪೆ. ಆರ್.ಪಿ.ಸಿ ಬ್ಯಾಂಡ್ಸ್‌ಮನ್, ಕೆಎಸ್‌ಆರ್‌ಪಿ. ಐಆರ್‌ಬಿ (252) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜುಲೈ 6,. ಶುಲ್ಕ ಪಾವತಿಗೆ ಜುಲೈ 8ನ್ನು ಮರು ನಿಗದಿ ಪಡಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net