ಕಥೆಗಾರ ಲೋಕೇಶ ಅಗಸನಕಟ್ಟೆಗೆ ಮಾಸ್ತಿ ಕಥಾ ಪುರಸ್ಕಾರ

Lokesh Agasanakatte
Published on

ಚಿತ್ರದುರ್ಗ: ಕವಿ,ವಿಮರ್ಶಕ ಹಾಗೂ ಕಥೆಗಾರ ಡಾ.ಲೋಕೇಶ ಅಗಸನಕಟ್ಟೆ ಅವರ ‘ಮೀಸೆ ಹೆಂಗಸು ಮತ್ತು ಇತರೆ ಕಥೆಗಳು’ ಕಥಾ ಸಂಕಲನಕ್ಕೆ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಕಥಾ ಪುರಸ್ಕಾರ ದೊರೆತಿದೆ.

ಪುರಸ್ಕಾರವು 25 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಪತ್ರವನ್ನು ಹೊಂದಿದೆ. ಕೃತಿ ಪ್ರಕಟಿಸಿರುವ ವಸಂತ ಪ್ರಕಾಶಕ್ಕೆ 10 ಸಾವಿರ ರೂ.ನಗದು ದೊರಕಲಿದೆ. ಆಯ್ಕೆ ಸಮಿತಿ ತೀರ್ಪುಗಾರರೆದುರು 24 ಕಥಾ ಸಂಕಲನಗಳು, 18 ಕಾದಂಬರಿಗಳು ಬಂದಿದ್ದವು.

ಅಗಸನಕಟ್ಟೆ ಅವರ ಹಲವು ಕೃತಿಗಳಿಗೆ ರಾಜ್ಯದ ಹಲವು ಪ್ರಶಸ್ತಿಗಳು ಲಭ್ಯವಾಗಿವೆ. ಮತ್ತೆ ಸೂರ‌್ಯ ಬರುತ್ತಾನೆ ಎಂಬ ಕವನ ಸಂಕಲನಕ್ಕೆ ಪಂಜೆ ಕಾವ್ಯ ಪ್ರಶಸ್ತಿ, ನೀರೊಳಗಿನ ಕಿಚ್ಚು ವಿಮರ್ಶಾ ಕೃತಿಗೆ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಹಟ್ಟಿಯೆಂಬ ಭೂಮಿಯ ತುಣುಕು ಕಥಾ ಸಂಕಲಕ್ಕೆ ಛಂದ ಪ್ರಶಸ್ತಿ ಹಾಗೂ ಇತ್ತೀಚೆಗೆ ಅವರು ಹೊರತಂದಿರುವ ಅತೀತ ಲೋಕದ ಮಹಾಯಾತ್ರಿಕ ಕಾದಂಬರಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚದುರಂಗ ದತ್ತಿ ಬಹುಮಾನಕ್ಕೆ ಭಾಜನವಾಗಿತ್ತು. ಅವರ ‘ನಮ್ಮೆಲ್ಲರ ಬುದ್ಧ’ ನಾಟಕ ಸಾಣೇಹಳ್ಳಿ ಶಿವಸಂಚಾರ ತಂಡದಿಂದ ರಾಜ್ಯದಾದ್ಯಂತ ಪ್ರದರ್ಶನಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net