ಅಪಘಾತ ವಲಯ ಸ್ಥಳ ಪರಿಶೀಲನೆ

CTD 4 BLACK SPOT (1)
Published on

ಚಿತ್ರದುರ್ಗ: ಈಗಾಗಲೇ ಬ್ಲಾಕ್‌ಸ್ಪಾಟ್‌ಗಳೆಂದು ಗುರುತಿಸಿರುವ ನಗರದ ಪ್ರಮುಖ ಅಪಘಾತ ಸ್ಥಳಗಳಲ್ಲಿ ಕೈಗೊಳ್ಳ ಬೇಕಿರುವ ಸುರಕ್ಷತೆಯ ಕ್ರಮಗಳ ಕುರಿತಂತೆ ಸಾರಿಗೆ, ಪೊಲೀಸ್ ಹಾಗೂ ರಾ.ಹೆ.ಅಧಿಕಾರಿಗಳ ಜಂಟಿ ತಂಡ ಗುರುವಾರ ಪರಿಶೀಲನೆ ನಡೆಸಿತು.

ಮುರುಘಾ ಮಠದ ಬಳಿ, ಜೆಎಂ ಐಟಿ ಸರ್ಕಲ್, ಮಂದಾರ ಬಾರ್ ಜಂಕ್ಷನ್, ಬಸವೇಶ್ವರ ಆಸ್ಪತ್ರೆ ಬಳಿ ಹಾಗೂ ನಗರದ ಹೊರ ವಲಯ ಉಪಾಧ್ಯಾಯ ಹೋಟೆಲ್ ಬಳಿ ಅಪಘಾತಗಳ ನಿಯಂತ್ರಣ ನಿಟ್ಟಿನಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್.ಹೆಗಡೆ, ಕೋಟೆ ಸರ್ಕಲ್ ಸಿಪಿಐ ಪ್ರಕಾಶ್, ರಾ.ಹೆ.ಪ್ರಾಧಿಕಾರ ಇಂಜಿನಿಯರ್ ವಿಶ್ವನಾಥ್ ಮತ್ತಿತರರು ಇದ್ದರು.

ಕ್ಯಾಟ್‌ಐ, ಪೇಂಟ್, ಸೂಚನಾ ಫಲಕ, ರಸ್ತೆ ಹಂಪ್ಸ್, ರಂಬಲ್ ಸ್ಟ್ರಿಪ್, ಯು ಶಾರ್ಫ್ ತಿರುವು ಸರಿಪಡಿಸುವುದು, ಕ್ಯಾಷ್ ಬ್ಯಾರಿಯರ್ ನಿರ್ಮಾಣ, ಸ್ಪೀಡ್ ಬ್ರೇಕ್, ಪಾದಾಚಾರಿ ದಾರಿ, ವಿದ್ಯುತ್ ಕಂಬಗಳಿದ್ದರೆ ಅವುಗಳ ಸ್ಥಳಾಂತರ ಇತ್ಯಾದಿ ಸುರಕ್ಷತಾ ಕ್ರಮಗಳ ಕುರಿತು ತಂಡ ಸ್ಥಳ ಪರಿಶೀಲಿಸಿತು.

ಜಿಲ್ಲಾದ್ಯಂತ ಈಗಾಗಲೇ 93ಕ್ಕೂ ಹೆಚ್ಚು ಅಪಘಾತ ಸಂಭವಿಸುವಂಥಹ ಸ್ಥಳಗಳಲ್ಲಿ ಗುರುತಿಸಿ, ಅಗತ್ಯ ಕ್ರಮಕ್ಕೆ ಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net