ನಿರಂತರ ಪರಿಶ್ರಮಕ್ಕೆ ಸಂದ ಪುರಸ್ಕಾರ

LAKSHMANA THELAGAVI
Published on

ಚಿತ್ರದುರ್ಗ: ನಿರಂತರ ಪರಿಶ್ರಮಕ್ಕೆ ಸಂದ ಪುರಸ್ಕಾರ ಇದಾಗಿದೆ ಎಂದು ಇತಿಹಾಸ ಸಂಶೋಧಕ ಪ್ರೊ.ಲಕ್ಷ್ಮಣ ತೆಲಗಾವಿ ಹೇಳಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಜೀವಮಾನ ಸಾಧನೆ ಗೌರವಕ್ಕೆ ಪಾತ್ರರಾಗಿರುವ ಅವರು ವಿಜಯವಾಣಿಯೊಂದಿಗೆ ತಮ್ಮ ಸಂತಸವನ್ನು ಹಂಚಿಕೊಂಡರು.

ಸತತ ಪರಿಶ್ರಮವೆಂಬುವುದು ಇತಿಹಾಸವೇ ಇರಲಿ ಮತ್ಯಾವುದೇ ಕ್ಷೇತ್ರಗಳೇ ಇರಲಿ ಅಲ್ಲಿಯ ಸಂಶೋಧಕರಿಗೆ ಯಶಸ್ಸನ್ನು ತಂದು ಕೊಡುತ್ತದೆ. ಅಧ್ಯಯನ ಶೀಲತೆ, ಕ್ಷೇತ್ರಕಾರ್ಯ, ಪ್ರವಾಸ, ಗ್ರಂಥಗಳ ಶ್ರದ್ಧಾಪೂರ್ವಕ ಪರಾಮರ್ಶನೆಯಿಂದ ಸಂಶೋಧಕ ತನ್ನ ಗುರಿ ಸಾಧಿಸಬಹುದು. ಉತ್ತಮ ಪ್ರತಿಫಲ ಪಡೆದು ಪರಂಪರೆ ಕಟ್ಟಿಕೊಡ ಬಹುದು. ನನ್ನ ಈ ಸಂಶೋಧನೆಯ ಕೆಲಸ ಮುಂದುವರಿಯುತ್ತಿದೆ. ಅಕಾಡೆಮಿಯ ಗೌರವದಿಂದಾಗಿ ನನ್ನ ಕೆಲಸಕ್ಕೆ ಇನ್ನಷ್ಟು ಪ್ರೋತ್ಸಾಹ ಸಿಕ್ಕಂತಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net