

ಚಿತ್ರದುರ್ಗ: ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಹಾಗಂಥ ನನಗೆ ಯಾವುದೇ ಅಸಮಾಧಾನ ಇಲ್ಲ. ಯಡಿಯೂರಪ್ಪ ಸರ್ಕಾರ ಇರುವುದೇ ನನಗೆ ಸಮಾಧಾನ ಎಂದು ಕೆಲ ಶಾಸಕರು ನಡೆಸಿದ ಸಭೆ ವಿರುದ್ಧ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಗುಟುರು ಹಾಕಿದರು.
ಬೆಂಗಳೂರು ಸಭೆ ಮಾಹಿತಿ ನನಗಿಲ್ಲ. ಬಂಡಾಯದ ಬಗ್ಗೆ ಗೊತ್ತಿಲ್ಲ. ಸರ್ಕಾರ ರಚನೆಗೆ ತ್ಯಾಗ ಮಾಡಿದವರನ್ನು ಮಂತ್ರಿ ಮಾಡಿರುವುದು ಸರಿ ಇದೆ. ಸಂಪುಟ ವಿಸ್ತರಣೆ ವೇಳೆ ಆದ್ಯತೆ ಮೇಲೆ ನನ್ನನ್ನೂ ಪರಿಗಣಿಸುವಂತೆ ಕೋರಿದ್ದೇನೆ ಎಂದರು.
ಬಿಜೆಪಿ ಸರ್ಕಾರ ಇರುವುದರಿಂದ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಬಂದಿದೆ. 92 ಸಾವಿರ ಜನರು ಮತಕೊಟ್ಟು ಗೆಲ್ಲಿಸಿದ್ದ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇನೆ. 2 ದಿನ ಬಿಟ್ಟು 2 ತಿಂಗಳಿಂದ ಹೊಸದುರ್ಗ ಬಿಟ್ಟು ಎಲ್ಲೂ ಹೋಗಿಲ್ಲ.