ಮಕ್ಕಳಲ್ಲಿ ಸಂಸ್ಕಾರ ಗುಣ ಬಿತ್ತಿ

CTD 14 VIDYAVAHINI
Published on

ಚಿತ್ರದುರ್ಗ: ತಂದೆ, ತಾಯಿಗಳ ಬಗ್ಗೆ ಪೂಜ್ಯಭಾವನೆಯೊಂದಿಗೆ, ಚಿಕ್ಕ ವಯಸ್ಸಿಂದಲೇ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಬೇಕು ಎಂದು ಉಪನ್ಯಾಸಕಿ ಜಯಶೀಲಾ ಹೇಳಿದರು.

ಯೋಗ ವೇದಾಂತ ಸೇವಾ ಸಮಿತಿ ಹಾಗೂ ವಿದ್ಯಾವಾಹಿನಿ ಪಬ್ಲಿಕ್ ಸ್ಕೂಲ್ ಆಶ್ರಯದಲ್ಲಿ ಮಾತಾಪಿತೃ ದಿನದ ಅಂಗವಾಗಿ ವಿದ್ಯಾನಗರದ ವಿದ್ಯಾವಾಹಿನಿ ಶಾಲಾ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಪಾಲಕರಲ್ಲಿ ದೇವರನ್ನು ಕಾಣುವ ಗುಣ ಮಕ್ಕಳು ಬೆಳೆಸಿಕೊಳ್ಳಬೇಕು ಎಂದರು.

ಬಾಲ್ಯದಲ್ಲಿ ಮಕ್ಕಳನ್ನು ಸರಿ ದಾರಿಯಲ್ಲಿ ಸಾಗಿದರೆ ಜೀವನ ಪೂರ್ತಿ ಅವರ ಭವಿಷ್ಯ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.

ಯೋಗ ವೇದಾಂತ ಸೇವಾ ಸಮಿತಿ ಕಾರ್ಯದರ್ಶಿ ಎಸ್.ಜಿ.ಸುರೇಶ್ ಬಾಬು ಮಾತನಾಡಿದರು. ವಿದ್ಯಾರ್ಥಿಗಳಿಂದ ಮಾತೃ ಪಾದ ಜರುಗಿತು. ಕಿರಣ್, ಮುಖ್ಯಶಿಕ್ಷಕಿ ಜಮಿರ್ ಉಲ್ಲಾ, ಶಿಕ್ಷಕಿಯರಾದ ಚೈತ್ರಾ, ಲೀಲಾವತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net