

ಚಿತ್ರದುರ್ಗ: ಪಾಕಿಸ್ತಾನದೆಡೆ ಅತಿಯಾದ ಪ್ರೀತಿ ತೋರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದೇಶ ಬಿಟ್ಟು ತೊಲಗಲಿ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚೆಗೆ ಕುಮಾರಸ್ವಾಮಿ ಗಂಭೀರ ರಾಜಕಾರಣಿಯಾಗಿ ವರ್ತಿಸುತ್ತಿಲ್ಲ. ಮಾಜಿ ಪ್ರಧಾನಿ ಪುತ್ರರಾದ ಮಾಜಿ ಸಿಎಂ ಈ ನಡೆ ನೋವು ತಂದಿದೆ ಎಂದರು.
ಭಾರತ ಹಿಂದು ರಾಷ್ಟ್ರ, ಇಲ್ಲಿ ಎಲ್ಲರೂ ಸಮಾನರು. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ದೇಶದ ಹಿತವನ್ನು ಬಲಿ ಕೊಡಲು ಬಿಜೆಪಿ ಬಿಡುವುದಿಲ್ಲ. ದೇಶ ಒಡೆಯುವಂಥ ಷಡ್ಯಂತ್ರೃದ ಮಾತುಗಳನ್ನು ಕುಮಾರಸ್ವಾಮಿ ಆಡಬಾರದು.