ಪದ್ಮಶ್ರೀ ಪ್ರಶಸ್ತಿ ಹಿಂಪಡೆಯಲು ಆಗ್ರಹ

CTD CONGRESS 25 (2)
Published on

ಚಿತ್ರದುರ್ಗ: ನಟಿ ಏಕ್ತಾ ಕಪೂರ್ ಅವರಿಂದ ಪದ್ಮಶ್ರೀ ಪ್ರಶಸ್ತಿ ಹಿಂಪಡೆಯಲು ಆಗ್ರಹಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ಒನಕೆ ಓಬವ್ವ ವೃತ್ತದ ಬಳಿ ಗುರುವಾರ ಪ್ರತಿಭಟನೆ ನಡೆಸಿದರು.

ಏಕ್ತಾ ಕಪೂರ್ ಪ್ರಶಸ್ತಿಗೆ ಅರ್ಹರಲ್ಲ. ಅವರು ಮುಖ್ಯಪಾತ್ರ ವಹಿಸಿದ ವೆಬ್‌ಸಿರೀಸ್‌ನಲ್ಲಿ ವೀರ ಯೋಧರ ಆತ್ಮ ಸ್ಥೈರ್ಯ ಕುಗ್ಗಿಸುವ ರೀತಿ ಚಿತ್ರೀಕರಿಸಲಾಗಿದೆ ಎಂದು ದೂರಿದರು.

ಈ ಚಿತ್ರ ಸಂಪ್ರದಾಯಸ್ಥ ಭಾರತೀಯ ನಾರಿಯರಿಗೆ ಅವಮಾನ ಮಾಡಿದೆ. ಇಂತಹ ಪಾತ್ರ ನಿರ್ವಹಿಸಿದ ಏಕ್ತಾ ಕಪೂರ್ ಅವರಿಂದ ಕೇಂದ್ರ ಸರ್ಕಾರ ಪದ್ಮಶ್ರೀ ಹಿಂಪಡೆಯಬೇಕು.

ದೇಶ ಹಾಗೂ ಭಾರತೀಯ ಸಂಸ್ಕೃತಿಗೆ ಧಕ್ಕೆ ತರುವಂಥ ಚಿತ್ರಗಳಿಗೆ ಶಾಶ್ವತವಾಗಿ ನಿರ್ಬಂಧ ವಿಧಿಸಿ, ಪ್ರಶಸ್ತಿಗಳ ಆಯ್ಕೆ ವೇಳೆ ಸೂಕ್ತ ಜಾಗ್ರತೆ ವಹಿಸಬೇಕು ಎಂದು ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಜಿಪಂ ಸದಸ್ಯಕೆ.ಅನಂತ್, ಪಕ್ಷದ ಮುಖಂಡರಾದ ಆರ್.ಅಶೋಕ್ ನಾಯ್ಡು, ಸೈಯದ್ ಖುದ್ದೂಸ್, ಪಾಲವ್ವನಹಳ್ಳಿ ಕರಿಯಪ್ಪ, ಮಹಮ್ಮದ್ ರಫೀಕ್, ಡಿ.ವಿ.ಅಶ್ವಿನ್ ಕುಮಾರ್, ಟಿ.ಎಚ್.ಕಾರ್ತಿಕ್, ಅನಿಲ್, ಜಿ.ಕೆ.ನಿಖಿಲ್ ಕುಮಾರ್, ಸಂದೀಪ್, ಎನ್.ಡಿ.ಕುಮಾರ್, ಮುದಸರ್ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net