ಶರಣ ಅಪ್ಪಂಗಳ ನಾಡಿನ ಸಾಕ್ಷಿ ಪ್ರಜ್ಞೆ

CTD BHOVI 01 (2)
Published on

ಚಿತ್ರದುರ್ಗ: ಪೂಜ್ಯ ಶರಣ ಬಸವ ಅಪ್ಪಂಗಳ ಮಾರ್ಗದರ್ಶನದಿಂದ ಸತ್ಯ ದರ್ಶನ, ಸಾಕ್ಷಾತ್ಕಾರದ ಮೂಲಕ ನಾಡಿನ ಸಾವಿರಾರು ಭಕ್ತರು ತಮ್ಮ ಬದುಕನ್ನು ಅಮೂಲ್ಯವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ ಎಂದು ಭೋವಿ ಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಾಗಲಕೋಟೆಯ ಲಿಂಗೈಕ್ಯ ಶ್ರೀ ಕರ್ತೃ ಶರಣ ಬಸವ ಅಪ್ಪಂಗಳ ಸ್ಮರಣೋತ್ಸವದಲ್ಲಿ ಮಾತನಾಡಿ, ಸಾಧನೆಯ ಗುರಿ ತಲುಪಿಸುವ ನಿಟ್ಟಿನಲ್ಲಿ ಅಪ್ಪಂಗಳು ಭಕ್ತರಿಗೆ ಸಾಕ್ಷಿ ಪ್ರಜ್ಞೆಯಾಗಿದ್ದರು. ಅಂತರಂಗ, ಬಹಿರಂಗ ಶುದ್ಧಿಯುಳ್ಳ ಘನ ಮಹಿಮ, ನಡೆ-ನುಡಿಯ ಸಮನ್ವಯವನ್ನು ಸಾಧಿಸಿದ್ದ ಅಪ್ಪಂಗಳು ತೋರಿದ ಗುರು ಪಥದಲ್ಲಿ ನಾವಿಂದು ಸಾಗಿರುವುದಾಗಿ ಶ್ರೀಗಳು ಹೇಳಿದರು.

ಜಿಲ್ಲಾ ಭೋವಿ ಮಠದ ಸಿಇಒ ಗೌನಹಳ್ಳಿ ಗೋವಿಂದಪ್ಪ, ಕಾರ್ಯದರ್ಶಿ ಎಚ್.ಲಕ್ಷ್ಮಣ್ ಇದ್ದರು. ನೂರಾರು ಬಡ ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net