ಜಲಾಮೃತ ಯೋಜನೇಲಿ ಲೋಪ ಆಗದಿರಲಿ

CTD 18 KERE
Published on

ಚಿತ್ರದುರ್ಗ: ನೀರಿನ ಸಂರಕ್ಷಣೆ ದೃಷ್ಟಿಯಿಂದ ರೂಪಿಸಿರುವ ಜಲಾಮೃತ ಯೋಜನೆ ಅನುಷ್ಠಾನದಲ್ಲಿ ಯಾವುದೇ ಲೋಪ ಆಗಬಾರದು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸಂಬಂಧಿಸಿದ ಅಧಿಕಾರಿಗಳನ್ನು ಎಚ್ಚರಿಸಿದರು.

ತಾಲೂಕಿನ ಚಿಕ್ಕಾಪುರ ಹಾಗೂ ಲಕ್ಷ್ಮೀಸಾಗರ ಕೆರೆಗಳ ಹೂಳೆತ್ತುವ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿ, ಜಲಮೂಲಗಳ ಪುನರುಜ್ಜೀವನ ಹಾಗೂ ಕೆರೆಗಳ ಸಂರಕ್ಷಣೆಗೆ ಒತ್ತು ಕೊಡಬೇಕು ಎಂದರು.

ಯೋಜನೆಯಡಿ ಸಣ್ಣ ನೀರಾವರಿ ಕೆರೆಗಳ ಅಭಿವೃದ್ಧಿಗಾಗಿ ಮೊದಲ ಹಂತದಲ್ಲಿ ಜಿಲ್ಲೆಯಲ್ಲಿ 31 ಕೆರೆಗಳನ್ನು ಗುರುತಿಸಲಾಗಿದೆ. ಗ್ರಾಪಂ ಮೇಲುಸ್ತುವಾರಿಯಲ್ಲಿ ಕೆರೆ ಮಣ್ಣನ್ನು ರೈತರು ಸ್ವಂತ ಖರ್ಚಿನಲ್ಲಿ ಜಮೀನುಗಳಿಗೆ ಬಳಸಿಕೊಳ್ಳಬಹುದು ಎಂದು ತಿಳಿಸಿದರು.

ಪಿಡಿಪಿ ಸಿ.ಎಲ್.ಬಸವರಾಜ್ ಮಾತನಾಡಿ, ಕೆರೆ ಮಣ್ಣಿಗೆ ಕೊಡುವ ವಂತಿಕೆ ಕೆರೆ ಅಭಿವೃದ್ಧಿಗೆ ಮೀಸಲಿಡುವುದಾಗಿ ಹೇಳಿದರು.

ಜಿಪಂ ಸಿಇಒ ಸಿ.ಸತ್ಯಭಾಮಾ, ಸದಸ್ಯ ಆರ್.ಕೃಷ್ಣಮೂರ್ತಿ, ಐಇಸಿ ಸಂಯೋಜಕ ಎಂ.ಎಸ್.ರವೀಂದ್ರನಾಥ್, ತಾಪಂ ಇಒ ಕೃಷ್ಣನಾಯ್ಕ, ನರೇಗಾ ಸಹಾಯಕ ನಿರ್ದೇಶಕ ಪಿ.ಟಿ.ಧನಂಜಯ, ತಾಂತ್ರಿಕ ಸಹಾಯಕ ದಿನೇಶ್, ಕೆಂಚೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net