ಲಿಖಿತ ಪ್ರಶ್ನೇಗೆ ಡಿಸಿ ಇಲ್ಲಿಯವರೆಗೂ ಉತ್ತರಿಸಿಲ್ಲ

RAGHUMURTHY T MLA
Published on

ಚಿತ್ರದುರ್ಗ: ಅಧಿಕಾರಿಗಳು ಪಕ್ಷಪಾತಿಗಳಾಗಬಾರದು. ಇವತ್ತು ಕಾಂಗ್ರೆಸ್, ದೇಶ, ರಾಜ್ಯದಲ್ಲಿ ಅಧಿಕಾರದಲ್ಲಿ ಇಲ್ಲದಿರಬಹುದು. ಆದರೆ, ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಇದ್ದ ಬಾಗಿನ ಅರ್ಪಣೆ ಕಾರ್ಯಕ್ರಮ ಸರ್ಕಾರದ್ದೊ, ಖಾಸಗಿಯದ್ದೋ ಎಂದು ಜೂ.5ರಂದು ಕೇಳಿದ್ದ ನನ್ನ ಲಿಖಿತ ಪ್ರಶ್ನೆಗೆ ಡಿಸಿ ಈವರೆಗೆ ಉತ್ತರಿಸಿಲ್ಲ. ಅವರ ಉತ್ತರ ನೋಡಿಕೊಂಡು ಹಕ್ಕುಚ್ಯುತಿ ಪ್ರಸ್ತಾಪವನ್ನು ಕಳಿಸುವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net