ಚಿತ್ರದುರ್ಗದಲ್ಲಿ ಉತ್ತಮ ಮಳೆ

Rain
Published on

ಚಿತ್ರದುರ್ಗ: ನಗರದಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆಗೆ ಉತ್ತಮ ಮಳೆಯಾಗಿದೆ. ಗುರುವಾರ ಚಳ್ಳಕೆರೆ ತಾಲೂಕಲ್ಲಿ ಅರ್ಧ ಗಂಟೆ ಮಳೆ ಸುರಿದಿದೆ. ಮಲ್ಲೂರಹಳ್ಳಿಯಲ್ಲಿ 5 ಮಿ.ಮೀ, ದೇವರೆಡ್ಡಿಹಳ್ಳಿ 3, ಗೌರಸಮುದ್ರ 3, ರೇಣುಕಾಪುರ 10, ಓಬಳಾಪುರ 6, ಬೆಳಗೆರೆ 4, ಬುಡ್ನಹಟ್ಟಿ 6, ಅಬ್ಬೇನಹಳ್ಳಿ 2, ತಳಕು 3, ದೊಡ್ಡ ಚೆಲ್ಲೂರು 2, ಎನ್.ದೇವರಹಳ್ಳಿ 3, ಚನ್ನಮ್ಮನಾಗತಿಹಳ್ಳಿ 2 ಮಿ.ಮೀ. ಮಳೆಯಾಗಿದೆ.

ಮೊಳಕಾಲ್ಮೂರಲ್ಲಿ ತುಂತುರು ಮಳೆ‘ ತಾಲೂಕಿನಲ್ಲಿ ಗುರುವಾರ ಬೆಳಗಿನ ಜಾವದಿಂದ ದಿನವಿಡೀ ಬಂದ ತುಂತುರು ಮಳೆ ರೈತರಲ್ಲಿ ಹರ್ಷ ತಂದಿದೆ. ಜೂನ್ ಬಂದರೂ ಮಳೆ ಬರಲಿಲ್ಲ ಎಂಬ ರೈತರ ಆತಂಕ ಗುರುವಾರ ಸುರಿದ ಉತ್ತಮ ಮಳೆಯಿಂದು ದೂರವಾಗಿದೆ. ಶೇಂಗಾ ಬಿತ್ತನೆಗೆ ಕಾಲವಾಗಿದ್ದು ಬೇಸಾಯ, ಬಿತ್ತನೆಗೆ ಸೂಕ್ತ ಕಾಲವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net