8ಕ್ಕೆ ಭಾವಸಾರ ಕ್ಷತ್ರೀಯ ಸಮಾಜ ಸಭೆ

BAVANI MANJUNATH
Published on

ಚಿತ್ರದುರ್ಗ: ಪತ್ರಿಕಾ ಛಾಯಾಗ್ರಾಹಕ ಭವಾನಿ ಮಂಜುನಾಥ ಪೊಕಾಳೆ ಸೇರಿ ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಮಹನೀಯರನ್ನು ಭಾವಸಾರ ಕ್ಷತ್ರೀಯ ಸಮಾಜ ಮಾ.8ರಂದು ಗೌರವಿಸಲಿದೆ.

ನಗರದ ಬಂಜಾರ ಭವನದಲ್ಲಿ ಅಂದು ಬೆಳಗ್ಗೆ 10.30ಕ್ಕೆ ಸಮಾಜದ ರಾಜ್ಯಾಧ್ಯಕ್ಷ ಸುದೀರ್ ನವುಲೆ ಅಧ್ಯಕ್ಷತೆಯಲ್ಲಿ ಆಯೋಜಿಸಿರುವ ಸಮಾಜದ ರಾಜ್ಯಮಟ್ಟದ 6ನೇ ಕಾರ್ಯಕಾರಿಣಿ ಸಭೆಯಲ್ಲಿ ಭವಾನಿ ಮಂಜುನಾಥ ಪೊಕಾಳೆ, ಕಿರಣ್ ಗುಜ್ಜರ್, ಎಚ್.ಎಸ್.ನಾರಾಯಣ ರಾವ್ ಗುಜ್ಜರ್, ರಾಮರಾವ್ ಮುಸಳೆ, ರಮೇಶ್ ರಾವ್ ಗುಜ್ಜರ್, ಶ್ರೀಧರ್ ಗುಜ್ಜರ್, ಯೋಗ ತರಬೇತುದಾರ ರವಿ ಅಂಬೇಕರ್, ಲಲಿತಾ ಜಗನ್ನಾಥ ಬೇದ್ರೆ ಅವರನ್ನು ಸನ್ಮಾನಿಸಲಾಗುತ್ತಿದೆ.

ರಾಜ್ಯ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಸಮಾಜದ ರಾಜ್ಯಾಧ್ಯಕ್ಷರ ಸಹಿತ ನಾನಾ ಪ್ರಮುಖ ಪದಾಧಿಕಾರಿಗಳು, ಮುಖಂಡರು ಭಾಗವಹಿಸಲಿದ್ದಾರೆ ಎಂದು ಸಮಾಜದ ಮುಖಂಡ ಆರ್.ಎಂ.ಶ್ಯಾಮ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net