ಸಾಮೂಹಿಕ ಕಲ್ಯಾಣ ಮಹೋತ್ಸವಕ್ಕೆ ಕರೊನಾ ಬ್ರೇಕ್?

MURUGA SWAMIJI
Published on

ಚಿತ್ರದುರ್ಗ: ಅಮಾವಾಸ್ಯೆ, ಹುಣ್ಣಿಮೆ, ಗ್ರಹಣ, ಹಬ್ಬ ಹರಿದಿನ ಯಾವುದನ್ನು ಲೆಕ್ಕಿಸದೇ ನಿರಂತರವಾಗಿ ಶ್ರೀ ಮುರುಘಾಮಠದಲ್ಲಿ ಪ್ರತಿ ತಿಂಗಳ 5 ನೇ ತಾರೀಖಿನಂದು ನಡೆಯುತ್ತಿದ್ದ ಸಾಮೂಹಿಕ ಕಲ್ಯಾಣ ಮಹೋತ್ಸವಕ್ಕೆ ಈ ಬಾರಿ ಕರೊನಾ ಬ್ರೇಕ್ ಹಾಕಲಿದೆಯೇ?

ಶ್ರೀ ಮಠದ ಪೀಠಾಧಿಪತಿ ಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ 30 ನೇ ವರ್ಷದ 3 ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಮಾ.5 ರಂದು ಪೂರ್ಣಗೊಂಡಿದೆ. ಆದರೆ ಈಗ ಏಪ್ರಿಲ್ 5 ರಂದು ನಡೆಸಬೇಕಿರುವ ಸಾಮೂಹಿಕ ಕಲ್ಯಾಣ ಮಹೋತ್ಸವದ ಕುರಿತಂತೆ ಜಿಜ್ಞಾಸೆ ಎದುರಾಗಿದೆ.

ಈ ಬಾರಿ ಮದುವೆಗೆ ನೋಂದಣಿ ಆರಂಭವಾಗಿದ್ದರೂ, ಮದುವೆ ಹೇಗೆ ನಡೆಸುವುದು? ಜನದಟ್ಟಣೆ ಇಲ್ಲದಂತೆ ಇನ್ನಷ್ಟು ಸರಳಗೊಳಿಸಿ ಆಯೋಜಿಸಬಹುದೇ ಎಂಬ ಚಿಂತನೆ ನಡೆದಿದೆ.

ಏತನ್ಮಧ್ಯೆ ಬೆಂಗಳೂರಲ್ಲಾದ ಅಸಂಖ್ಯ ಪ್ರಮಥ ಗಣಮೇಳದ ಯಶಸ್ಸಿನ ಹಿನ್ನೆಲೆಯಲ್ಲಿ ಶ್ರೀ ಶರಣರ ಅಭಿನಂದನಾ ಸಮಾರಂಭ ಹಾಗೂ ಯುಗಾದಿಯಂದು ಏರ್ಪಡಿಸಿದ್ದ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಮುಂದೂಡುವ ಸಾಧ್ಯತೆ ಹೆಚ್ಚಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net