ನರೇಗಾ ಸಹಾಯಧನಕ್ಕೆ ಅರ್ಜಿ

NAREGA LOGO download
Published on

ಚಿತ್ರದುರ್ಗ: ನರೇಗಾ ಯೋಜನೆಯಡಿ ಹೊಸದಾಗಿ ತೋಟಗಾರಿಕೆ ಬೆಳೆ ವಿಸ್ತರಣೆ, ಮಣ್ಣು ಮತ್ತು ನೀರು ಸಂರಕ್ಷಣೆಗೆ ಸಂಬಂಧಿಸಿದ ಕಾಮಗಾರಿಗಳಿಗೆ ಅರ್ಜಿ ಸಲ್ಲಿಸಿ ಸಹಾಯಧನ ಪಡೆಯಬಹುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಜಿ.ಸವಿತಾ ತಿಳಿಸಿದ್ದಾರೆ.

ತೆಂಗು, ಮಾವು, ಸಪೋಟ, ದಾಳಿಂಬೆ, ಸೀಬೆ, ನಿಂಬೆ, ಹುಣಸೆ, ನುಗ್ಗೆ, ನೇರಳೆ, ಕಾಳುಮೆಣಸು, ಸೀತಾಫಲ, ನೆಲ್ಲಿ, ಹೂವುಗಳ ಪ್ರದೇಶಾಭಿವೃದ್ಧಿ, ತೆಂಗು, ಮಾವು ಪುನಃಶ್ಚೇತನ, ಕೊಳವೆಬಾವಿ ಮರುಪೂರಣ ಮತ್ತು ಬದು ನಿರ್ಮಾಣ ಕಾಮಗಾರಿಗಳಿಗೆ ಬಿಪಿಎಲ್ ಕಾರ್ಡ್ ಹೊಂದಿರುವ ಎಸ್ಸಿ, ಎಸ್ಟಿ, ಸಣ್ಣ ಮತ್ತು ಅತಿಸಣ್ಣ ರೈತರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಮಾಹಿತಿಗೆ ಸಹಾಯವಾಣಿ-08194-231480 ಅಥವಾ ಆಯಾ ತಾಲೂಕು ತೋಟಗಾರಿಕೆ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net