ನರಗುಂದ ಬಂಡಾಯ 12ಕ್ಕೆ ತೆರೆಗೆ

ctd 6 naragundad
Published on

ಚಿತ್ರದುರ್ಗ: 1980ರಲ್ಲಿ ನರಗುಂದ, ನವಲಗುಂದದಲ್ಲಿ ಪೊಲೀಸರ ಗುಂಡಿಗೆ ಹುತಾತ್ಮರಾದ ರೈತರ ಕಥೆಯನ್ನಾಧರಿಸಿದ ನರಗುಂದ ಬಂಡಾಯ ಸಿನಿಮಾ ಮಾ.12ರಂದು ರಾಜ್ಯದ 200 ಚಿತ್ರ ಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಚಿತ್ರ ನಿರ್ಮಾಪಕ ಸಿದ್ದೇಶ್ ವಿರಕ್ತ ಮಠ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಸಮಸ್ಯೆ ಮೇಲೆ ಬೆಳಕು ಚೆಲ್ಲುವುದಕ್ಕಾಗಿಯೇ ಈ ಸಿನಿಮಾ ನಿರ್ಮಿಸಲಾಗಿದೆ. ಅಂದು ಧಾರವಾಡ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದ ಮನವಿಯನ್ನು ಕಸದ ಬುಟ್ಟಿಗೆ ಎಸೆದ್ದರಿಂದಾಗಿ ವ್ಯಕ್ತವಾದ ರೈತರ ಆಕ್ರೋಶವನ್ನಾಧರಿಸಿ ಚಿತ್ರ ನಿರ್ಮಾಣವಾಗಿದೆ ಎಂದರು.

ನಟಿ ಶುಭಾಪುಂಜಾ ಮಾತನಾಡಿ, ಚಿತ್ರದಲ್ಲಿ ರೈತ ವಿರೋಧಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಸಿಡಿದೇಳುವ ಪಾತ್ರ ನನ್ನದು. ಉತ್ತರ ಕರ್ನಾಟಕ ಭಾಷೆಯಲ್ಲಿರುವ ಈ ಚಿತ್ರದ ಚಿತ್ರೀಕರಣ ಹುಬ್ಬಳ್ಳಿ, ನರಗುಂದ, ನವಲಗುಂದದಲ್ಲಾಗಿದೆ ಎಂದರು. ಕೆ.ಬಸವರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net