10 ಸಾವಿರ ಕುಟುಂಬಗಳಿಗೆ ಕಿಟ್

muruga sharanaru1
Published on

ಚಿತ್ರದುರ್ಗ: ರಾಜ್ಯಪಾಲರು, ಮುಖ್ಯಮಂತ್ರಿ ಸೇರಿ ಅನೇಕರ ಮನವಿ ಹಾಗೂ ಶ್ರೀಮಠದ ಆಶಯದಂತೆ ಕರೊನಾ ಸಂಕಷ್ಟಕ್ಕೆ ಸಿಲುಕಿದ 10 ಸಾವಿರ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಲಾಗಿದೆ ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.

ಏಪ್ರಿಲ್ 4ರಿಂದ ನಿರಂತರ ಒಂದು ತಿಂಗಳು ಸಮಾಜದ ವಿವಿಧ ವರ್ಗದ ಅಂದಾಜು ಬಡ ಕುಟುಂಬಗಳಿಗೆ ಕಿಟ್ ವಿತರಿಸಲಾಗಿದೆ.

ಕರೊನಾದಿಂದಾಗಿ ಪ್ರಪಂಚವೇ ನಲುಗಿದೆ. ಹಿಂದೆಂದೂ ಕಂಡು ಕಾಣರಿಯದಂಥ ಸಾವು-ನೋವು, ಆರ್ಥಿಕ ಹಿಂಜರಿತ, ಮಾನಸಿಕ ಕ್ಷೋಭೆಗಳಿಂದಾಗಿ ಮಾನವ ಕುಲ ಜರ್ಜರಿತವಾಗಿದೆ.

ಈ ಕ್ಲಿಷ್ಟಕರ ಸಂದರ್ಭದಲ್ಲಿ ಗರ್ಭಿಣಿ, ನವಜಾತ ಶಿಶು ಹಾಗೂ ಹಿರಿಯ ನಾಗರಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು ಹಾಗೂ ಕಾರ್ಮಿಕರ ಗುಳೆ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಗಳು ಮುಂದಾಗಬೇಕು ಎಂದು ಶರಣರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net