

ಚಿತ್ರದುರ್ಗ: ನಗರಸಭೆ ಕಚೇರಿಯಲ್ಲಿ ಶುಕ್ರವಾರ ಜೀವ ವೈವಿಧ್ಯತೆ ಸಂರಕ್ಷಣೆ ದಾಖಲು ಕುರಿತಂತೆ ಜಾಗೃತಿ ಸಭೆ ಜರುಗಿತು.
ಈ ವೇಳೆ ಮಾತನಾಡಿದ ಪರಿಸರ ವಿಜ್ಞಾನಿ ಡಾ.ಕೆ.ಕೆ.ಕಮಾನಿ ಮಾತನಾಡಿ, ಜಗತ್ತಿನಲ್ಲಿ ಎಲ್ಲ ಜೀವಿಗಳಿಗೆ ಬದುಕುವ ಹಕ್ಕಿದೆ. ಆದರೆ, ಆಧುನಿಕತೆ ಭರಾಟೆಯಲ್ಲಿ ಕೆಲವು ಪ್ರಬೇಧಗಳು ಸಂಪೂರ್ಣವಾಗಿ ಕಣ್ಮರೆಯಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ನಗರಸಭೆ ಆಯುಕ್ತ ಜೆ.ಟಿ.ಹನುಮಂತರಾಜು, ಪರಿಸರ ಇಂಜಿನಿಯರ್ ಜಾಫರ್, ಪರಿಸರ ಪ್ರೇಮಿ ಡಾ.ಎಚ್.ಎಸ್.ಕೆ.ಸ್ವಾಮಿ,ನಾಟಿ ವೈದ್ಯ ಗಣೇಶ್, ಪ್ರಾಧ್ಯಾಪಕರಾದ ಶಂಕರಮ್ಮ, ಪ್ರೊ.ನಾಗಶ್ರಿ, ಸ್ಪಂದನಾ ಸಂಸ್ಥೆ ಪ್ರತಿನಿಧಿ ಪ್ರಕಾಶ್, ಕಿರಿಯ ಆರೋಗ್ಯ ನಿರೀಕ್ಷಕ ನಾಗರಾಜ್ ಮತ್ತಿತರರು ಇದ್ದರು.