ನಮ್ಮ ಜೀವದ ಕೀಲಿ ನಮ್ಮ ಕೈಲಿ

CTD KODENAHATTI 25 (2)
Published on

ಚಿತ್ರದುರ್ಗ: ಕರೊನಾ ವೈರಸ್ ಹರಡದಂತೆ ಕಡಿವಾಣ ಹಾಕಲು ಸಾಮಾಜಿಕ ಅಂತರ ಅನಿವಾರ್ಯ ಎಂದು ಪ್ರೇರಣಾ ಸಂಸ್ಥೆ ಮುಖ್ಯಸ್ಥೆ ಜಿ.ರೇಖಾ ಹೇಳಿದರು.

ನಗರ ಸಮೀಪದ ಕೋಡೇನಹಟ್ಟಿ, ವಿವೇಕಾನಂದ ಬಡಾವಣೆ, ಬುದ್ಧ ನಗರದಲ್ಲಿ ಶನಿವಾರ ಆಹಾರದ ಕಿಟ್ ವಿತರಣೆ ಹಾಗೂ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ಜೀವದ ಕೀಲಿ ನಮ್ಮ ನಡೆಯಲ್ಲಿದೆ ಎಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು ಎಂದು ಹೇಳಿದರು.

ಮುಖಂಡ ಟಿ.ಮಂಜುನಾಥ್ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಅಪಾಯಕ್ಕೆ ಸಿಲುಕಬೇಕಾಗುತ್ತದೆ ಎಂದು ತಿಳಿಸಿದರು.

ವೈಯಕ್ತಿಕ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಎಲ್ಲೆಂದರಲ್ಲಿ ಉಗಿಯುವುದು ರೋಗವನ್ನು ಆಹ್ವಾನಿಸಿದಂತೆ ಎಂದು ಎಚ್ಚರಿಸಿದರು.

ಜಲತಜ್ಞ ದೇವರಾಜ ರೆಡ್ಡಿ ಮಾತನಾಡಿದರು. ರವೀಂದ್ರಕುಮಾರ್, ದಿನೇಶ್, ಬಿ.ಎಂ.ದಯಾನಂದ, ಸೋಮು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net