ರಸ್ತೆ ಅಭಿವೃದ್ಧಿಗೆ ಬೇಕು ಸಹಕಾರ

CTD 16 GHT
Published on

ಚಿತ್ರದುರ್ಗ: ರಸ್ತೆ ಅಗಲೀಕರಣ ವೇಳೆಯಲ್ಲಿ ವ್ಯಾಪಾರ ವಹಿವಾಟು, ಸಂಚಾರದಲ್ಲಿ ಅಡಚಣೆ ಸಹಜವಾಗಿದ್ದು,ಅಭಿವೃದ್ಧಿಗೆ ನಿಮ್ಮಗಳ ಸಹಕಾರ ಅಗತ್ಯವಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ನಾಗರಿಕರಿಗೆ ಮನವಿ ಮಾಡಿದರು.

ನಗರದ ಆರ್‌ಟಿಒ ಕಚೇರಿ ಬಳಿ ಲೋಕೋಪಯೋಗಿ ಇಲಾಖೆ ನಿರ್ಮಿಸುತ್ತಿರುವ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಸೋಮವಾರ ಚಾಲನೆ ನೀಡಿದ ಅವರು, ಅಂದಾಜು 32 ಕೋಟಿ ರೂ. ವೆಚ್ಚದಲ್ಲಿ ತುರುವನೂರು ರಸ್ತೆ ಸರ್ಕಲ್ ವೃತ್ತದಿಂದ ಮುಸ್ಟೂರುವರೆಗೆ ರಸ್ತೆ ಅಭಿವೃದ್ಧಿ ಆಗಲಿದೆ ಎಂದರು.

ಜಿಲ್ಲಾ ಅಸ್ಪತ್ರೆಯಿಂದ ತುರುವನೂರು ರಸ್ತೆಯ ತಿಪ್ಪಜ್ಜಿ ಸರ್ಕಲ್ ವರೆಗೆ 5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.

ನಗರಸಭೆ ಸದಸ್ಯ ವಿರೇಶ್, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾದ ಕೃಷ್ಣಪ್ಪ, ಚಂದ್ರಪ್ಪ, ಮುಖಂಡರಾದ ನವೀನ್ ಚಾಲುಕ್ಯ, ನಾಗರಾಜರೆಡ್ಡಿ, ಕಾಸವರಟ್ಟಿ ಕೃಷ್ಣಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net