ಮಾಜಿ ಆರೋಪಗಳು ಸುಳ್ಳು

GOOLIHATTI SHEKAR
Published on

ಚಿತ್ರದುರ್ಗ: ಹೊಸದುರ್ಗದ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಮಾಡಿರುವ ತಮ್ಮ ವಿರುದ್ಧದ ಆರೋಪಗಳನ್ನು ಶಾಸಕ ಗೂಳಿಹಟ್ಟಿ ಶೇಖರ್ ಅಲ್ಲಗೆಳೆದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಹೊಸದುರ್ಗದಲ್ಲಿ ಇರುವುದನ್ನು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ನಮ್ಮ ಸರ್ಕಾರ ಬಂದು ಆರು ತಿಂಗಳಾಗಿದೆ, ಇದನ್ನೇ ಸಹಿಸಲು ತಮ್ಮಿಂದ ಆಗುತ್ತಿಲ್ಲವೆಂದರು.

ಕ್ವಾರಂಟೈನ್ ವಿಷಯದಲ್ಲಾದ ಗಲಾಟೆ,ತಮ್ಮ ಪ್ರತಿಕೃತಿ ದಹನದ ನಂತರ ಅದನ್ನು ವಿರೋಧಿಸಿ ತಾವು ನಡೆಸಿದ್ದ ಧರಣಿ ಕುರಿತು ವಿವರಿಸಿದರು.

ಅಂದಿನ ಗಲಾಟೆಯ ಹಿಂದೆ ಕೆಲವರ ಕುಮ್ಮಕ್ಕಿದೆ ಎಂದು ಆರೋಪಿಸಿದ ಅವರು,ಈ ವಿಷಯದಲ್ಲಿ ನನ್ನ ತಪ್ಪು ಏನಿದೆಂಬುದನ್ನು ಹೇಳಲಿ ರಾಜಕೀಯ ವಿರೋಧಿಗಳಿಗೆ ಸವಾಲು ಹಾಕಿದರು.

ಅವರ ದೌರ್ಜನ್ಯಗಳನ್ನು ಸಹಿಸಲಾಗದೇ ಜನ ನನ್ನನ್ನು ಗೆಲ್ಲಿಸಿದ್ದಾರೆ ಎಂದು ಮಾಜಿ ಶಾಸಕರ ವಿರುದ್ಧ ಹರಿಹಾಯ್ದರು. ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ, ಉದ್ಯೋಗ ಖಾತ್ರಿಯಲ್ಲಿ ಭ್ರಷ್ಟಾ ಚಾರ,ಅಕ್ರಮ ಮದ್ಯ ಮಾರಾಟ ಹಾಗೂ ಜೂಜಾಟದಂಥ ಅಕ್ರಮ ಚಟುವಟಿಕೆಗಳು ಕಡಿವಾಣ ಹಾಕಬೇಕಿದೆ. ಇದರಲ್ಲಿ ರಾಜಕಾರಣ ಹುಡುಕುವುದು ಸರಿಯಲ್ಲವೆಂದು ಪ್ರತಿಪಾದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net