ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಇಲ್ಲ

PRABHU CHOWANA download
Published on

ಚಿತ್ರದುರ್ಗ: ಕೋವಿಡ್-19 ಸೋಂಕು ಹತೋಟಿಗೆಂದು ಲಾಕ್‌ಡೌನ್ ಮತ್ತೆ ಆಗುವುದಿಲ್ಲ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಹೇಳಿದರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ನಿವಾಸದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿ, ನಮ್ಮ ಜೀವ ನಮ್ಮ ಕೈಯಲ್ಲಿ, ಸೋಂಕು ಪ್ರಕರಣ ಹೆಚ್ಚುತ್ತಿರುವುದರಿಂದಾಗಿ ಮತ್ತೆ ಲಾಕ್‌ಡೌನ್ ಎಂದು ಸುಳ್ಳು ಸುದ್ದಿ ಹಬ್ಬಿದೆ ಎಂದರು.

ಕರೊನಾ ಜಗತ್ತಿಗೆ ಪಾಠವನ್ನು ಕಲಿಸಿದೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಬಿಜೆಪಿಯಲ್ಲಿ ಯಾವುದೇ ಬಣಗಳಿಲ್ಲ. ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯನ್ನು ಪಕ್ಷದ ವರಿಷ್ಠರು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.

ಗೋ ಮಾತಾ ಮೇರಿ ಮಾತಾ ಎಂದ ಚವ್ಹಾಣ್, ಕಸಾಯಿ ಖಾನೆಗಳಿಂದ ಗೋವುಗಳನ್ನು ಕಾಪಾಡಲು ಆದ್ಯತೆ ಕೊಡಲಾಗುವುದು. ರಾಜ್ಯದಲ್ಲಿ 1.35 ಕೋಟಿ ಹಸು-ಎಮ್ಮೆ, 1.65 ಕುರಿ- ಮೇಕೆ, 5 ಕೋಟಿ ಕೋಳಿಗಳಿವೆ ಎಂದರು.

ರೈತರಿಗೆ ಮೇವಿನ ಕಿಟ್‌ಗಳನ್ನು ಕೊಡಲಾಗುತ್ತಿದೆ. ಜಾನುವಾರಗಳ ಔಷೋಧಪಾಚರಕ್ಕಾಗಿ ಉಚಿತ ಔಷಧವನ್ನು ಕೊಡಲಾಗುತ್ತಿದೆ. ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇವೆ. ರಾಜ್ಯದಲ್ಲಿ ನೋಂದಾಯಿತ ಖಾಸಗಿ ಗೋ ಶಾಲೆಗಳಿಗೆ ಅನುದಾನ ಕೊಡಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net