ರಾಜ್ಯದಲ್ಲಿ ಕರೊನಾ ಕಂಟ್ರೋಲ್

JAGADISH SHETTAR download
Published on

ಚಿತ್ರದುರ್ಗ: ದೇಶದ ಇತರೆಡೆ ಹೋಲಿಸಿದರೆ ಕರ್ನಾಟಕದಲ್ಲಿ ಕರೊನಾ ಸೋಂಕು, ರೋಗಿಗಳ ಮರಣ ಪ್ರಮಾಣ ಕಡಿಮೆ ಇದೆ ಎಂದು ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಹುಬ್ಬಳ್ಳಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಚಿತ್ರದುರ್ಗ ನಗರದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು.

ಸೋಂಕಿತರ ಒಟ್ಟು ಪ್ರಮಾಣದಲ್ಲಿ ಶೇ.60 ತಬ್ಲಿಘಿ ಜಮಾತ್‌ಗೆ ಸೇರಿದ್ದವರಿದ್ದಾರೆ. ಬೆಳಗಾವಿ ಜಿಲ್ಲೆ ಹಿರೇಬಾಗೆವಾಡಿ, ಕುಡುಚಿ ಮತ್ತಿತರ ಪ್ರದೇಶಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಾರದಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಆದರೆ, ದೇಶವೇ ಸಂಕಷ್ಟಕ್ಕೆ ಸಿಲುಕಿರುವ ಈ ಸನ್ನಿವೇಶದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಚನಾತ್ಮಕ ಸಲಹೆಗಳನ್ನು ನೀಡುವಂಥ ಮುತ್ಸದಿತನ ಪ್ರದರ್ಶಿಸಬೇಕೆ ಹೊರತು, ಅನಗತ್ಯ ಟೀಕೆ ಮಾಡುತ್ತಿರುವುದು ಸರಿಯಲ್ಲ. ಅವರು ರಾಮನಗರ ಸಹಿತ ಇಡೀ ರಾಜ್ಯದ ಜನರ ಯೋಗ ಕ್ಷೇಮದತ್ತ ಆಸಕ್ತಿ ತೋರಬೇಕು ಎಂದು ಮನವಿ ಮಾಡಿದರು.

ಚೀನಾ ಸಹಿತ ವಿದೇಶಿ ಬಂಡವಾಳನ್ನು ಕರ್ನಾಟಕ ಸರ್ಕಾರ ಮುಕ್ತವಾಗಿ ಸ್ವಾಗತಿಸುತ್ತದೆ. ರಾಜ್ಯದಲ್ಲಿ ಕೈಗಾರಿಕೆ ಚಟುವಟಿಕೆಗಳ ಆರಂಭಕ್ಕೆ ಷರತ್ತು ಬದ್ಧ ಅನುಮತಿ ಕೊಡಲಾಗಿದೆ ಎಂದರು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಎಂಎಲ್‌ಸಿ ಪ್ರದೀಪ್ ಶೆಟ್ಟರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net