ಬಿಸಿಯೂಟಕ್ಕೆ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

Chitradurga, midday meal, students, protest,
Published on

ಚಿತ್ರದುರ್ಗ: ಬಿಸಿಯೂಟ ಸೇರಿ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಯುವ ಜನ ಮುನ್ನಡೆ ಸಂಘಟನೆ ಆಶ್ರಯದಲ್ಲಿ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ವಿದ್ಯಾರ್ಥಿಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಇದೇ ವೇಳೆ ಮನವಿ ಸ್ವೀಕರಿಸಿದ ಎಡಿಸಿ ಸಿ. ಸಂಗಪ್ಪ ಅವರಿಂದ ಸಾಂಕೇತಿಕವಾಗಿ ಕೆಲ ವಿದ್ಯಾರ್ಥಿಗಳಿಗೆ ಉಪಾಹಾರ ವಿತರಿಸುವ ಮೂಲಕ ಬಿಸಿಯೂಟದ ಮಹತ್ವವನ್ನು ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಪ್ರತಿಭಟನಾಕಾರರು ಮಾಡಿದರು.

ಬಹುತೇಕ ಕಾಲೇಜು ವಿದ್ಯಾರ್ಥಿಗಳು ಮಧ್ಯಾಹ್ನದ ಊಟವಿಲ್ಲದೆ ಅಲ್ಸರ್, ಗ್ಯಾಸ್ಟ್ರಿಕ್, ರಕ್ತ ಹೀನತೆ, ರೋಗ ನಿರೋಧಕ ಶಕ್ತಿ ಕುಂದುವಂತಹ ಸಮಸ್ಯೆಗಳಿಂದ ಬಳಲುವಂತಾಗಿದೆ. ಅನೇಕರ ಅನುತ್ತೀರ್ಣಕ್ಕೂ ಹಸಿವು ಕಾರಣವಾಗಿದೆ.

ಆದ್ದರಿಂದ ಪೌಷ್ಟಿಕ ಬಿಸಿಯೂಟ ಕೊಡಬೇಕು. 2012ರ ರಾಜ್ಯ ಯುವ ನೀತಿ ಜಾರಿಗೊಳಿಸಬೇಕು. ಯುವ ಸಹಾಯವಾಣಿ 18004251448 ನ್ನು ಯುವಕರ ಎಲ್ಲ ಸಮಸ್ಯೆಗಳಿಗೂ ನಿಗದಿಪಡಿಸಬೇಕು. ಇತರೆ ಸಹಾಯವಾಣಿಗಳಂತೆ ಇದರ ಅಂಕೆಗಳನ್ನು ನಾಲ್ಕಕ್ಕೆ ಇಳಿಸಬೇಕು.
ಸ್ಪಂದನ ಕೇಂದ್ರಗಳಿಗೆ ಆಪ್ತ ಸಮಾಲೋಚಕರನ್ನು ನೇಮಿಸಬೇಕು. ತಾಲೂಕು ಕೇಂದ್ರಗಳಲ್ಲೂ ಸ್ಪಂದನ ಕೇಂದ್ರಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು. ಟಿ. ಕಾಂತರಾಜ್, ಜಿ.ಎಸ್. ಶಂಕರ್, ಆನಂದ್, ಅಶೋಕ, ರೂಪಾ, ಹೊಳಿಯಪ್ಪ, ಬಸವರಾಜ, ರೂಪಾ, ಎಂ. ವಿಜಯ ಕುಮಾರ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net