7ರಂದು ದೇಣಿಗೆ ಸಮರ್ಪಣೆ

ESHWARANDAPURI SWAMIJI, HSD (2)
Published on

ಚಿತ್ರದುರ್ಗ: ಮಠದ ಕುರುಬರಹಟ್ಟಿ ಶ್ರೀಗುರು ರೇವಣಸಿದ್ದೇಶ್ವರ ಬಳಗ, ಕನಕ ಭವನ ನಿರ್ಮಾಣಕ್ಕೆ ಮಠದ ಕುರುಬರಹಟ್ಟಿ ಹಾಲುಮತ ಸಮುದಾಯ ಸಂಗ್ರಹಿಸಿರುವ ದೇಣಿಗೆಯ ಸಮರ್ಪಣಾ ಸಮಾರಂಭವನ್ನು ಜ.7ರ ಬೆಳಗ್ಗೆ 10.30ಕ್ಕೆ ಗ್ರಾಮದಲ್ಲಿ ಆಯೋಜಿಸಲಾಗಿದೆ.

ಕಾಗಿನೆಲೆ ಕನಕ ಮಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಜರುಗಲಿದೆ. ಹೊಸದುರ್ಗ ಕೆಲ್ಲೋಡು ಕನಕಗುರು ಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಪೀಠದ ಆಡಳಿತಾಧಿಕಾರಿ ಬಿ.ಜಿ.ಗೋವಿಂದಪ್ಪ ಕಾರ್ಯಕ್ರಮ ಉದ್ಘಾಟಿಸುವರು.

ಎಂ.ಕೆ.ಹಟ್ಟಿ ಮಾಜಿ ಛೇರ‌್ಮನ್ ಪಾಪಣ್ಣ ಅಧ್ಯಕ್ಷತೆ ವಹಿಸಲಿದ್ದು, ಸಮುದಾಯದ ಗಣ್ಯರು ಇರುತ್ತಾರೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net